ಹೋಬಳಿಯಲ್ಲೂ ಇಂಗ್ಲಿಷ್ ಶಾಲೆ: ಗ್ರಾಮೀಣ ಮಕ್ಕಳಿಗೆ ಅನುಕೂಲ

ಕೆಲ ಶ್ರೀಮಂತರು, ಅನುಕೂಲಸ್ಥರು, ಸಂಘಟನೆಗಳು, ಅಧಿಕಾರಿಗಳು, ರಾಜಕಾರಿಣಿಗಳು, ಕನ್ನಡ ಸಾಹಿತಿಗಳು ಈ ನೆಲದ ಭಾಷೆ ಕನ್ನಡದ ಬಗ್ಗೆ ನಾಲಿಗೆ ತುದಿಯಿಂದಲೇ ಉತ್ತಮವಾಗಿ ಮಾತಾಡುತ್ತಾ ತಮ್ಮ ಸುಪುತ್ರರನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಕಳಿಸುತ್ತಿದ್ದುದರಿಂದ ಕನ್ನಡ ಭಾಷೆ ಅಭಿವೃದ್ದಿಯಾಗುವುದಾದರೂ ಹೇಗೆ?
40 ವರ್ಷಗಳಿಂದ ಕನ್ನಡ ಭಾಷೆ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಇಂಥವರ ಕೂಗು ಎದ್ದರೂ ವಿಜ್ಞಾನ, ತಂತ್ರಜ್ಞಾನ ಹಲವಾರು ಕ್ಷೇತ್ರಕ್ಕೆ ಬೇಕಾಗಿರುವ ಕನ್ನಡ ಮಾಧ್ಯಮದ ಪುಸ್ತಕಗಳೇ ಲಭ್ಯವಿಲ್ಲ.
ಗ್ರಾಮೀಣ ಪ್ರದೇಶದ ಮಕ್ಕಳು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸಲು ಅನುಕೂಲವಾಗಲೆಂದು ಸರ್ಕಾರ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಪ್ರಾರಂಭಿಸುತ್ತಿದೆ. ಆದರೆ ಈ ಡೋಂಗಿ ಕನ್ನಡ ಅಭಿಮಾನಿಗಳು, ಸಾಹಿತಿಗಳು ಇದನ್ನು ವಿರೋಧಿಸುತ್ತಿರುವುದು ಸರಿಯಲ್ಲ.
ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವವರನ್ನು, ವೇದಿಕೆ ಮೇಲೆ ಕುಳಿತು ಚಪ್ಪಾಳೆಗಾಗಿ ಭಾಷಣ ಮಾಡುವವರನ್ನು ಸಾರ್ವಜನಿಕರು ಸಾರಾಸಾಗಾಟವಾಗಿ ತಿರಸ್ಕರಿಸಬೇಕಾದ ಕೆಲಸ ತುರ್ತಾಗಿ ಆಗಬೇಕಾಗಿದೆ.












Click it and Unblock the Notifications