ಸಾಮೂಹಿಕ ನಗ್ನ ಸ್ನಾನ: 400 ಜನಕ್ಕೆ ಜಳಕ ಪುಳಕ
ಲಂಡನ್,
ಜೂನ್ 22: ಇದು ನಗ್ನವಾಗಿ ಜಳಕ ಮಾಡೋ ದಾಖಲೆ. ಅದರಲ್ಲೇನು ವಿಶೇಷ ಅಂತೀರಾ. ಶೇ. 90ರಷ್ಟು ಜನರು ಬಾತ್ ರೂಮಿನಲ್ಲಿ ನಗ್ನವಾಗಿ ಮೀಯುವುದು ಹೊಸತೇನಲ್ಲವಲ್ಲ. ಆದರೆ ಈ ದಾಖಲೆಯ ಜಳಕ ಅಂತದ್ದಲ್ಲ. ಗಂಡು ಹೆಣ್ಣು ಬೇಧಭಾವವಿಲ್ಲದೆ ನಾಲ್ಕು ನೂರು ಜನರು ಸಾಮೂಹಿಕವಾಗಿ ಸಮುದ್ರಕ್ಕಿಳಿದು ಮಾಡೋ ಜಳಕ. ಸಮುದ್ರದಲ್ಲಿರುವ ಮೀನುಗಳಿಗೆ ಪುಕ್ಕಟೆ ಪುಳಕ! id="toptextpromo">ಸೌತ್
ವೇಲ್ ನ ರೊಶಿಲಿ ಬೀಚ್ ನಲ್ಲಿ ಇಂತಹ ನಗ್ನ ಸ್ನಾನಕೂಟ ಆಯೋಜಿಸಲಾಗಿತ್ತು. ಇದರಲ್ಲಿ ಜಗತ್ತಿನ ವಿವಿಧ ಕಡೆಯ 400 ಜನ ಆಸಕ್ತರು ಭಾಗವಹಿಸಿದ್ದರು. ಹೀಗಾಗಿ ಈ ಹಿಂದಿನ 250 ಜನರ ನಗ್ನ ಸಾಮೂಹಿಕ ಸ್ನಾನ ದಾಖಲೆಯನ್ನು ಇದು ಮುರಿದು ಹಾಕಿದೆ. ಸದ್ಯ ಈ ದಾಖಲೆಯನ್ನು ಗಿನ್ನಿಸ್ ಸಂಸ್ಥೆಗೆ ನೀಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ಗಂಡುಹೆಣ್ಣು
ಭೇದಭಾವವಿಲ್ಲದೇ ಸೌತ್ ವೇಲ್ಸ್ ಸಮುದ್ರದಂಡೆಗೆ ಬಂದು ಬಟ್ಟೆ ಬಿಚ್ಚಿ ಸಮುದ್ರಕ್ಕೆ ಇಳಿದರು. ಅಲ್ಲಿ ಸ್ವೇಚ್ಛೇಯಾಗಿ ಈಜಾಡಿದರು. ಒಬ್ಬರನೊಬ್ಬರು ಗೋಳು ಹೊಯ್ದುಕೊಂಡರು, ಆಟವಾಡಿದರು. ತಮಾಷೆ ಮಾಡಿದರು. ಆದರೆ ಹೆಚ್ಚು ಮಜಾ ಮಾಡಲು ಸಾಧ್ಯವಾಗಿಲ್ಲ. ಯಾಕೆಂದರೆ ಸಮುದ್ರದ ನೀರು ಜಾಸ್ತಿ ಥಂಡಿಯಾಗಿದ್ದು ಮರಗಟ್ಟಿಸುವಂತ್ತಿತ್ತು ಎಂದು ಜಳಕ ಮಾಡಿದವರ ಅಭಿಪ್ರಾಯ.











Click it and Unblock the Notifications