ಜುಲೈ7 ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ
ಮುಂಬೈ,
ಜೂನ್ 22: ದೇಶಾದ್ಯಂತ ಬ್ಯಾಂಕ್ ನೌಕರರು ಜುಲೈ 7 ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಸಾರ್ವಜನಿಕ ರಂಗದ ಬ್ಯಾಂಕ್‌ಗಳು, ಖಾಸಗಿ ವಲಯದ ಬ್ಯಾಂಕ್‌ಗಳು, ವಿದೇಶಿ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣಾ ಬ್ಯಾಂಕ್‌ಗಳ ಮತ್ತು ಸಹಾಕಾರಿ ಬ್ಯಾಂಕ್‌ಗಳ ಸುಮಾರು 10 ಲಕ್ಷ ನೌಕರರು ಮತ್ತು ಅಧಿಕಾರಿಗಳು ಮುಷ್ಕರ ನಡೆಸಲಿದ್ದಾರೆ ಎಂದು ಬ್ಯಾಂಕ್ ಯೂನಿಯನ್ ಮೂಲಗಳು ತಿಳಿಸಿವೆ. id="toptextpromo">ಬ್ಯಾಂಕ್
ವಲಯಗಳ ಪರಿಷ್ಕರಣೆ ಮತ್ತು ಬ್ಯಾಂಕ್ ಕೆಲಸಗಳನ್ನು ಹೊರಗುತ್ತಿಗೆ ನೀಡುವುದರ ವಿರುದ್ದ, ಖಾಂಡೆಲ್‌ವಾಲ ಸಮಿತಿ ಶಿಫಾರಸ್ಸನ್ನು ವಜಾಗೊಳಿಸುವಂತೆ, ಬಾಕಿ ಉಳಿದಿರುವ ಸಮಸ್ಯೆಗಳ ಮತ್ತು ಬೇಡಿಕೆಗಳ ನಿರ್ವಹಣೆಯನ್ನು ಕೋರಿ ಮುಷ್ಕರ ನಡೆಸಲಾಗುವುದು ಎಂದು ಯೂನಿಯನ್ ಪ್ರಕಟಣೆ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಬ್ಯಾಂಕುಗಳಲ್ಲಿ
ತನ್ನ ಪಾಲನ್ನು ಸರಕಾರ ಕಡಿಮೆ ಮಾಡುವುದು ಮತ್ತು ವಿದೇಶಿ ಬ್ಯಾಂಕ್ ದಾರರಿಗೆ ಹೆಚ್ಚುವರಿ ಮತದಾನದ ಹಕ್ಕನ್ನು ಕೊಡಮಾಡುವುದಕ್ಕೂ ಯೂನಿಯನ್ ತೀವ್ರ ವಿರೋಧ ವ್ಯಕ್ತಪಡಿಸಿದೆ.











Click it and Unblock the Notifications