ಡ್ರಾಪ್ ನೆಪ: ಸಾಫ್ಟ್‌ವೇರ್ ಉದ್ಯೋಗಿಗಳ ದೋಚುತ್ತಿದ್ದವರ ಸೆರೆ

Umesh SK
ಬೆಂಗಳೂರು, ಜೂನ್ 18: ಡ್ರಾಪ್ ನೀಡುವ ಪ್ರಲೋಭವೊಡ್ಡಿ ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳನ್ನು ಕಾರಿನಲ್ಲಿ ಕರೆದೊಯ್ದು ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡುತ್ತಿದ್ದ ಏಳು ಯುವಕರ ತಂಡವೊಂದನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ಸಿದ್ದಾಪುರದ ನಿಮ್ಹಾನ್ಸ್ ವಸತಿಗೃಹ ನಿವಾಸಿ ಪ್ರಶಾಂತ್, ಕದಿರೇನಹಳ್ಳಿಯ ಪರಶಿವ, ಕುಮಾರಸ್ವಾಮಿ ಲೇಔಟ್‌ನ ಸುನಿಲ, ಪ್ರದೀಪ, ಮಾಗಡಿಯ ಉದಯ್‌ಕುಮಾರ್, ಜಯರಾಮ ಮತ್ತು ಪ್ರಶಾಂತ ಬಂಧಿತರು. ಇವರೆಲ್ಲ 20-25 ವರ್ಷದೊಳಗಿನವರು.

'ಸುನಿಲ ಬಿಬಿಎಂ, ಪ್ರದೀಪ ಡಿಪ್ಲೊಮಾ ವಿದ್ಯಾರ್ಥಿಗಳು. ಸುಲಭವಾಗಿ ಹಣ ಗಳಿಸಿ ಮೋಜಿನ ಜೀವನ ನಡೆಸುವ ಉದ್ದೇಶದಿಂದ ಅವರು ಇತರ ಆರೋಪಿಗಳ ಜತೆ ಸೇರಿ ದರೋಡೆ ಮಾಡುತ್ತಿದ್ದರು. ಸಾಫ್ಟ್‌ವೇರ್ ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳು ಹೆಚ್ಚಾಗಿ ಸಂಚರಿಸುವ ಹೊಸೂರು ರಸ್ತೆ, ಬಿಟಿಎಂ ಲೇಔಟ್, ಸಿಲ್ಕ್‌ ಬೋರ್ಡ್ ಜಂಕ್ಷನ್, ಎಲೆಕ್ಟ್ರಾನಿಕ್‌ ಸಿಟಿ ಭಾಗಗಳಲ್ಲಿ ಅವರು ದರೋಡೆ ಮಾಡುತ್ತಿದ್ದರು.

'ಕಾರಿನಲ್ಲಿ ಸಂಚರಿಸುತ್ತಿದ್ದ ಆರೋಪಿಗಳು ಡ್ರಾಪ್ ನೀಡುವುದಾಗಿ ಸಾಫ್ಟ್‌ವೇರ್ ಎಂಜಿನಿಯರ್ ಗಳನ್ನು ಕರೆದೊಯ್ದು ಆಭರಣ, ಮೊಬೈಲ್ ಫೋನ್ ಮತ್ತು ಹಣ ದೋಚುತ್ತಿದ್ದರು. ಇವರ ಬಂಧನದಿಂದ ಐದು ದರೋಡೆ ಪ್ರಕರಣಗಳು ಪತ್ತೆಯಾಗಿವೆ. ಐದು ಲಕ್ಷ ರೂಪಾಯಿ ಮೌಲ್ಯದ ಆಭರಣ, ಕಾರು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ' ಎಂದು ಇನ್‌ಸ್ಪೆಕ್ಟರ್ ಎಸ್. ಕೆ.ಉಮೇಶ್ ತಿಳಿಸಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಅವರ ಮಾರ್ಗದರ್ಶನದಲ್ಲಿ ಉಮೇಶ್ ಮತ್ತು ಎಸ್‌ಐ ಮನೋಜ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+