ಮಂಗಳೂರಿನಲ್ಲಿ ಬಂಗುಡೆ, ಸೊರಕೆ, ಅಂಜಲ್, ಎಟ್ಟಿ ತುಟ್ಟಿ

ಮಳೆಗಾಲದಲ್ಲಿ ಕಡಲಿಗೆ ಮೀನುಗಾರರು ಇಳಿಯುತ್ತಿಲ್ಲ. ಜೂನ್ 15ರಿಂದ ಆಗಸ್ಟ್ 10ರ ತನಕ ಕರಾವಳಿಯಲ್ಲಿ ಮೀನು ಹಿಡಿಯುವುದು ನಿಷೇಧಿಸಲಾಗಿದೆ. ಹೀಗಾಗಿ ದರ ಗಗನಕ್ಕೇರಿದೆ.
ಹಾವು ಮೀನು(ರಿಬನ್ ಫಿಷ್) ಕೆ. ಜಿ. ದರ 60 ರು. ಇದ್ದದ್ದು 70 ರು.ಗೆ ತಲುಪಿದೆ. ಸೊರಕೆ(ಕಟಲ್ ಫಿಷ್) 110 ರು. ಇದ್ದದ್ದು 130 ರು.ಗೆ ತಲುಪಿದೆ. ಸೀರ್ ಕೆ.ಜಿ.ಗೆ 550 ರು.ಗೆ ಮತ್ತು ಖುರ್ಚಿ(ಪಂಫ್ರೆಟ್) ಕೆಜಿಗೆ 650 ರು.ಗೆ ತಲುಪಿದೆ. ಒಂದು ಕೆ.ಜಿ. ಎಟ್ಟಿ ದರ 130 ರು.ಗೆ ತಲುಪಿದೆ. ಬಂಗುಡೆ, ಬೂತಾಯಿ ಕೂಡ 30-40 ರು. ಹೆಚ್ಚಳವಾಗಿದೆ. ಉಳಿದಂತೆ ಅಂಜಲ್, ಬೆರಕೆ, ಸೊರಕೆ ಮದಿಮಲ್ ದರಗಳು ಕೂಡ ಹೆಚ್ಚಾಗಿವೆ.
ಆದರೂ ಈ ತಿಂಗಳು ಕಳೆದ ವರ್ಷಕ್ಕಿಂತ ಹೆಚ್ಚು ಮೀನು ಹಿಡಿಯಲಾಗಿದೆ. ಈ ವರ್ಷ 1,34,739 ಟನ್ ಮೀನು ಹಿಡಿಯಲಾಗಿದೆ. ಕಳೆದ ವರ್ಷದ 90,345 ಟನ್ ಗೆ ಹೋಲಿಸಿದರೆ ಈ ವರ್ಷ ಶೇ. 49ರಷ್ಟು ಹೆಚ್ಚಳವಾಗಿದೆ. ಈ ಆರ್ಥಿಕ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟಾರೆ ಮೀನು ವಹಿವಾಟು 560.90 ಕೋಟಿ ರು.ಗೆ ತಲುಪಿದ್ದು ಕಳೆದ ಆರ್ಥಿಕ ವರ್ಷದ 407.63 ಕೋಟಿ ರು.ಗೆ ಹೋಲಿಸಿದರೆ ಶೇ. 37.60 ಹೆಚ್ಚಾಗಿದೆ.












Click it and Unblock the Notifications