ರತ್ನಗಿರಿಯಲ್ಲಿ ಭೂಕುಸಿತ:ಕೊಂಕಣ ರೈಲು ಯಾನ ಸ್ಥಗಿತ
ಮಂಗಳೂರು,
ಜೂ.18: ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ರತ್ನಗಿರಿ ಸಮೀಪ ಭೂಕುಸಿತ ಉಂಟಾಗಿದ್ದು ಮಂಗಳೂರಿನಿಂದ ಮುಂಬೈಗೆ ಹೋಗುವ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. id="toptextpromo">ರತ್ನಗಿರಿ
ರೈಲ್ವೇ ನಿಲ್ದಾಣದ ಸಮೀಪ ಕೊಂಕಣ ರೈಲ್ವೇ ಹಳಿಗಳ ಮೇಲೆ ಬಂಡೆಕಲ್ಲು, ಭಾರೀ ಪ್ರಮಾಣದ ಮಣ್ಣು ಬಿದ್ದಿರುವುದಾಗಿ ತಿಳಿದುಬಂದಿದೆ. ಬಂಡೆಕಲ್ಲು, ಮಣ್ಣು ತೆರವು ಕಾರ್ಯಾಚರಣೆ ಯುದ್ದೋಪಾದಿಯಲ್ಲಿ ನಡೆಯುತ್ತಿದ್ದು ಮುಂದಿನ ಎರಡು ದಿನಗಳ ಕಾಲ ರೈಲಿ ಯಾನ ಅಸಾಧ್ಯವೆನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಶನಿವಾರ
ಮತ್ತು ಭಾನುವಾರ ಮಂಗಳೂರಿನಿಂದ ಮುಂಬೈಗೆ ಹೀಗುವ ಮತ್ತು ಆಕಡೆಯಿಂದ ಬರುವ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದ್ದು ಮುಂಗಡ ಟಿಕೇಟು ಕಾದಿರಿಸಿದ್ದವರಿಗೆ ಹಣ ವಾಪಸು ಮಾಡಲಾಗಿದೆ. ರೈಲು ಸಂಚಾರ ರದ್ದಾದಕಾರಣ ಮಂಗಳೂರು-ಮುಂಬೈ ನಡುವೆ ಸಂಚರಿಸುವ ಖಾಸಗಿ ಬಸ್ಸುಗಳಿಗೆ ಶುಕ್ರದೆಸೆ.











Click it and Unblock the Notifications