ಚಿಕಿತ್ಸೆಗಾಗಿ ಕೊಟ್ಟಕಲ್ ಆಸ್ಪತ್ರೆಗೆ ಯಡಿಯೂರಪ್ಪ ದಾಖಲು
ಬೆಂಗಳೂರು,
ಜೂನ್ 14: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ರಾಂತಿಗಾಗಿ ಸೋಮವಾರ ರಾತ್ರಿಯೇ ಕೇರಳದ ಕೊಟ್ಟಾಯಂಗೆ ವಿಮಾನದಲ್ಲಿ ತೆರಳಿದ್ದಾರೆ. ಪುತ್ರಿ ಉಮಾ ಹಾಗೂ ಕೆಲವೇ ಮಂದಿ ಭದ್ರತಾ ಸಿಬ್ಬಂದಿಯೊಂದಿಗೆ ಕೊಟ್ಟಕಲ್ ಗೆ ಭೇಟಿ ನೀಡಿದ್ದು, ಇದೇ 19ರ ಸಂಜೆ ನಗರಕ್ಕೆ ವಾಪಸಾಗಲಿದ್ದಾರೆ. id="toptextpromo">ಈ
ಹಿನ್ನೆಲೆಯಲ್ಲಿ ಮಂಗಳವಾರದಿಂದ (ಜೂ. 14) ಭಾನುವಾರದವರೆಗೆ ಜನತಾದರ್ಶನ ಕಾರ್ಯಕ್ರಮ ಇರುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ. ಮಲ್ಲಪುರಂ ಜಿಲ್ಲೆಯ ಸುಪ್ರಸಿದ್ಧ ಕೊಟ್ಟಕಲ್ ಆರ್ಯ ವೈದ್ಯಶಾಲಾ ಆಸ್ಪತ್ರೆಯಲ್ಲಿ ಯಡಿಯೂರಪ್ಪ ಅವರು ಐದು ದಿನಗಳ ಕಾಲ ಆಯುರ್ವೇದ ಚಿಕಿತ್ಸೆ ಪಡೆಯಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಖ್ಯಾತ
ಹಿನ್ನೆಲೆ ಗಾಯಕ ಕೆ.ಜೆ. ಯೇಸುದಾಸ್ ಸಹ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಮುಖ್ಯಸ್ಥ, ಖ್ಯಾತ ವೈದ್ಯ ಪಿ.ಕೆ. ವಾರಿಯರ್ ಇಬ್ಬರಿಗೂ ಮಂಗಳವಾರದಿಂದ ಚಿಕಿತ್ಸೆ ನೀಡಲಿದ್ದಾರೆ. ಎ.ಎಚ್. ಶಿವಯೋಗಿ, ಮೂವರು ಮೇಲ್ಮನೆ ಸದಸ್ಯರು ಯಡಿಯೂರಪ್ಪ ಅವರಿಗೆ ಜತೆಗೂಡಿದ್ದಾರೆ.











Click it and Unblock the Notifications