ಕುದುರೆಯಿಂದ ಬಿದ್ದು ಗಾಯಮಾಡಿಕೊಂಡ ನಿತ್ಯಾನಂದ

ಕುದುರೆ ಸವಾರಿ ಅಭ್ಯಾಸ ಮಾಡುತ್ತಿರಬೇಕಾದರೆ ಕೆಳಗೆ ಬಿದ್ದುಬಿಟ್ಟಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
"ಕುದುರೆ ಸವಾರಿ ಸಂದರ್ಭದಲ್ಲಿ ಸ್ವಾಮೀಜಿಗಳು ಆಕಸ್ಮಿಕವಾಗಿ ಕೆಳಗೆ ಬಿದ್ದು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಭಕ್ತವೃಂದ ಭಯ ಪಡುವ ಅವಶ್ಯಕತೆಯಿಲ್ಲ. ಅವರು ಆದಷ್ಟು ಬೇಗ ಸ್ವಾಮೀಜಿಗಳು ಗುಣಮುಖರಾಗಿ ಧ್ಯಾನ ಪೀಠಕ್ಕೆ ತೆರಳಲಿದ್ದಾರೆ" ಎಂದು ನಿತ್ಯಾನಂದರ ಶಿಷ್ಯ ವೃಂದದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ನಿತ್ಯಾನಂದ ದಾಖಲಾಗಿದ್ದಾರೆ. ಮುರಿದಿರುವ ಕೈಗೆ ಇನ್ನೇನು ಕೆಲವೇ ಸಮಯದಲ್ಲಿ ನುರಿತ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ. ನಿತ್ಯಾನಂದ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಕೊಠಡಿಗೆ ತನ್ನ ಶಿಷ್ಯ ವೃಂದವನ್ನು ಹೊರತು ಪಡಿಸಿ ಯಾರಿಗೂ ಪ್ರವೇಶ ನೀಡದೆ ಭಾರೀ ಭದ್ರತೆ ಒದಗಿಸಲಾಗಿದೆ.












Click it and Unblock the Notifications