ಸದ್ದಿಲ್ಲದೆ ಉಪವಾಸ ಮಾಡಿ ಸತ್ತುಹೋದ ಸ್ವಾಮಿ
ಡೆಹ್ರಾಡೂನ್,
ಜೂನ್ 14: 'ಗಂಗಾ ನದಿ ಉಳಿಸಿ' ಆಂದೋಲನದಲ್ಲಿ ಏಕಾಂಗಿಯಾಗಿ 73 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ವಾಮಿ ನಿಗಮಾನಂದ ಸೋಮವಾರ ಅಸುನೀಗಿದ್ದಾರೆ. id="toptextpromo">ಈ
ಮಧ್ಯೆ, ಗಾಂಧಿವಾದಿ ಅಣ್ಣಾ ಹಜಾರೆ ಹಾಗೂ ಬಾಬಾ ರಾಮದೇವ್ ಅವರು ಭ್ರಷ್ಟಾಚಾರ ನಿಗ್ರಹ ಮತ್ತು ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣ ವಾಪಸಾತಿಗಾಗಿ ನಡೆಸುತ್ತಿದ್ದ ಉಪವಾಸಗಳು ಹೆಚ್ಚು ಸದ್ದು ಮಾಡಿದವೇ ಹೊರತು ನಿಗಮಾನಂದರ ಉಪವಾಸ ಸದ್ದಿಲ್ಲದೇ ಅವರನ್ನು ಬಲಿತೆಗೆದುಕೊಂಡಿದೆ. ಇವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಯಾವೊಬ್ಬ ರಾಜಕೀಯ ನಾಯಕನಾಗಲಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಲಿ ಇರಲಿಲ್ಲ. id='are-slot-1' class='oiad oi-axt oiadv'> id='top-searched-articles'>ಇನ್ನೂ
ದುರ್ದೈವದ ಸಂಗತಿಯೆಂದರೆ ರಾಮದೇವ್ ದಾಖಲಾಗಿದ್ದ ಇಲ್ಲಿನ ಜಾಲಿಗ್ರಂಥ್ ನಲ್ಲಿರುವ ಹಿಮಾಲಯ ಆಸ್ಪತ್ರೆಯಲ್ಲಿಯೇ ನಿಗಮಾನಂದರು ಕೊನೆಯುಸಿರೆಳೆದಿದ್ದಾರೆ. ಅಂದಹಾಗೆ, ಹರಿದ್ವಾರದ ಬಳಿ ಗಂಗಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು 34 ವರ್ಷದ ನಿಗಮಾನಂದ ಸ್ವಾಮಿ ಫೆಬ್ರವರಿ 19ರಿಂದ ಉಪವಾಸ ವ್ರತ ಕೈಗೊಂಡಿದ್ದರು. ಏಪ್ರಿಲ್ 27ರಂದು ಅವರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಅವರು ತಮ್ಮ ನಿರಶನವನ್ನು ಕೈ ಬಿಟ್ಟಿರಲಿಲ್ಲ.











Click it and Unblock the Notifications