ನೈಸ್ ರಿಯಲ್ ಎಸ್ಟೇಟ್ ದಂಧೆಗೆ ತೀವ್ರ ವಿರೋಧ: ಶೋಭಾ

ಬೆಂಗಳೂರು ದಕ್ಷಿಣ ತಾಲೂಕಿನ ಕೆ.ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಸೋಮವಾರ ಮಾತನಾಡುತ್ತಾ ಈ ವಿಷಯ ಹೇಳಿದರು. 'ನಾನು ಯಾವಾಗಲೂ ರೈತರ ಪರ ಇದ್ದೇನೆ. ರಸ್ತೆ ನಿರ್ಮಾಣಕ್ಕೆ ಅಭ್ಯಂತರವಿಲ್ಲ. ಸೌಲಭ್ಯದ ಹೆಸರಿನಲ್ಲಿ ಕೃಷಿಕರ ಬದುಕು ಕಿತ್ತುಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ' ಎಂದರು.
'ನೈಸ್ ಸಂಸ್ಥೆ ಭೂಸ್ವಾಧೀನಪಡಿಸಿಕೊಂಡಿರುವ 1 ಎಕರೆ ಜಮೀನಿಗೆ 41 ಲಕ್ಷ ರೂ. ಹಾಗೂ 1 ನಿವೇಶನ ನೀಡಲು ಪ್ರಯತ್ನ ನಡೆಸಿದ್ದೇನೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ' ಎಂದು ಶೋಭಾ ತಿಳಿಸಿದರು.
'ಕೆರೆಕಟ್ಟೆಗಳನ್ನು ನಿರ್ಮಾಣ ಮಾಡುವ ಯೋಗ್ಯತೆ ನಮಗಿಲ್ಲ. ಹಿಂದಿನ ನಮ್ಮ ಪೂರ್ವಜರು ಮುಂದಾಲೋಚನೆಯಿಂದ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಿದ್ದಾರೆ. ಕೆಲವು ಪ್ರಭಾವಿ ವ್ಯಕ್ತಿಗಳಿಂದ ಕೆರೆಗಳು ಒತ್ತುವರಿಯಾಗುತ್ತಿವೆ. ಒತ್ತುವರಿದಾರರಿಂದ ಅವುಗಳನ್ನು ತೆರವುಗೊಳಿಸಲಾಗುವುದು' ಎಂದು ಭರವಸೆ ನೀಡಿದರು.












Click it and Unblock the Notifications