ಲೈಂಗಿಕ ಕಿರುಕುಳ : ಮೈಸೂರು ವಿವಿ ಪ್ರೊಫೆಸರ್ ತಪ್ಪಿತಸ್ಥ

Prof Shivabasavaiah found guilty, Panel report
ಮೈಸೂರು, ಜೂ 14: ಪಿಎಚ್‌ಡಿ ವಿದ್ಯಾರ್ಥಿನಿ ಸರಿತಾ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ 11 ಮಂದಿ ತಂಡ ತನ್ನ ವರದಿಯನ್ನು ಸಲ್ಲಿಸಿದೆ. ಕೆ ಯಶೋಧರಾ ನೇತೃತ್ವದ ತಂಡದ ವರದಿಯಂತೆ, ಪ್ರೊ ಶಿವಬಸವಯ್ಯ ಅವರ ಮೇಲಿನ ಆರೋಪಗಳು ನಿಜ ಹಾಗೂ ಅವರು ಶಿಕ್ಷೆಗೆ ಅರ್ಹರಾಗಿದ್ದಾರೆ ಎನ್ನಲಾಗಿದೆ. ಜೂ 24 ರಂದು ಈ ವರದಿ ಯೂನಿವರ್ಸಿಟಿ ಸಿಂಡಿಕೇಟ್ ಸಭೆಯಲ್ಲಿ ಸಲ್ಲಿಸಲಾಗುತ್ತದೆ. ಅಂತೂ ಸರಿತಾ ಕಣ್ಣೀರಿಗೆ ಬೆಲೆ ಸಿಕ್ಕಿದೆ.

ವರದಿಯಲ್ಲಿ ಏನಿದೆ ಎಂಬುದನ್ನು ಬಹಿರಂಗ ಪಡಿಸದ ಕೆ ಯಶೋಧರಾ ಅವರು, ಶಿವಬಸವಯ್ಯ ಅವರು ಶಿಕ್ಷೆಗೆ ಅರ್ಹರು ಎಂದು ನಮ್ಮ ತಂಡ ವರದಿಯಲ್ಲಿ ಸೂಚಿಸಿ ಯೂನಿವರ್ಸಿಟಿ ರಿಜಿಸ್ಟ್ರಾರ್ ಪಿಎಸ್ ನಾಯಕ್ ಗೆ ಸಲ್ಲಿಸಿದ್ದೇವೆ.. ವರದಿಯಲ್ಲಿರುವ ವಿಷಯವನ್ನು ಸದ್ಯಕ್ಕೆ ಬಹಿರಂಗಪಡಿಸುವಂತಿಲ್ಲ ಎಂದಿದ್ದಾರೆ.

ಮಹಿಳಾ ದೌರ್ಜನ್ಯ ದೂರು ಸಮಿತಿ ಕ್ರಾಫರ್ಡ್ ಹಾಲ್‌ನಲ್ಲಿ ಸಂಶೋಧನಾ ವಿದ್ಯಾರ್ಥಿನಿ ಎಂ.ಸರಿತಾ ಮಾಡಿರುವ ಆರೋಪಗಳು ಹಾಗೂ ಪ್ರೊಫೆಸರ್ ಶಿವಬಸವಯ್ಯ ಅವರ ತಕರಾರು ಅರ್ಜಿಗಳನ್ನು ಪರಿಶೀಲಿಸಿದ ನಂತರ ಈ ವರದಿಯನ್ನು ಸಿದ್ಧಪಡಿಸಿದೆ. ಚೀನಾಕ್ಕೆ ತೆರಳಿರುವ ಉಪಕುಲಪತಿ ವಿಜಿ ತಳವಾರ್ ಅವರು ಬಂದ ಮೇಲೆ ಜೂ.24ರಂದು ವಿಶ್ವವಿದ್ಯಾಲಯದ ಸಭೆ ನಡೆಸಿ ಈ ವರದಿಯನ್ನು ಮಂಡಿಸಲಾಗುವುದು.

ಕೇಸ್ ಹಿಸ್ಟರಿ: ಪ್ರಾಣಿಶಾಸ್ತ್ರದ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ. ಶಿವಬಸವಯ್ಯ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರೆಸಿರುವ ವಿದ್ಯಾರ್ಥಿನಿ ಸರಿತಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪ್ರೊ.ಶಿವಬಸವಯ್ಯ ವಿರುದ್ಧ ಕುಲಪತಿ ವಿಜಿ ತಳವಾರ್ ಅವರಿಗೆ ದೂರು ನೀಡಿದ್ದರು.ಪ್ರೊ.ಶಿವಬಸವಯ್ಯರನ್ನು ವಿಚಾರಣೆ ನಡೆಸಿ ವಿದ್ಯಾರ್ಥಿನಿ ಮಾಡಿರುವ ಆರೋಪವನ್ನು ಕುಲ ಸಚಿವರು ತಳ್ಳಿಹಾಕಿದ್ದರು. ಬದಲಿಗೆ ಸರಿತಾರ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅವಮಾನಿಸಿದ್ದರು. ನಂತರ, ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಸರಿತಾರ ಪತಿ ಮೈಸೂರು ವಿವಿ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+