ಚೀನಾ ಹ್ಯಾಂಡ್ ಸೆಟ್ ಗಿಂತ ದೇಶಿ ಮ್ಯಾಕ್ಸ್ ಮೊಬೈಲ್ ಮೇಲು

ಕಂಪೆನಿಯು ಸಂಪೂರ್ಣ ಭಾರತೀಯ ಕಚ್ಚಾ ವಸ್ತುಗಳನ್ನೇ ಬಳಸಿಕೊಂಡು ಅಪ್ಪಟ ಭಾರತೀಯ ಕಂಪೆನಿಯಾಗಬೇಕೆಂದು ಹರಿದ್ವಾರ ಸಮೀಪ ಮೊಬೈಲ್ ತಯಾರಿಕಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ ಎಂದು ಮ್ಯಾಕ್ಸ್ ಮೊಬೈಲ್ ಕಮ್ಯುನಿಕೇಷನ್ಸ್ ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಅಗರ್ ವಾಲ್ ಹೇಳಿದರು.
ಚೀನಾದಿಂದ ಮೊಬೈಲ್ ಉಪಕರಣಗಳನ್ನು ಆಮದು ಮಾಡಿಕೊಳ್ಳುವದಕ್ಕಿಂತಲೂ ಭಾರತದಲ್ಲೇ ತಯಾರಿಸಿ ಲಾಭ ಗಳಿಸಲು ಕಂಪೆನಿ ಮುಂದಾಗಿದೆ ಎಂದೂ ಅವರು ಹೇಳಿದರು. ಚೀನಾದಲ್ಲಿ ಕಾರ್ಮಿಕರ ವೇತನ ದಿನೇ ಹೆಚ್ಚುತಿದ್ದು ದೇಶದಲ್ಲಿ ಕಾರ್ಮಿಕರ ವೇತನ ಕಡಿಮೆ ಇದೆ ಎಂದು ಅವರು ಹೇಳಿದರು.
ಕೌಶಲ್ಯವುಳ್ಳ ಕೆಲಸಗಾರರಿಗೆ ಚೀನಾದಲ್ಲಿ ತಿಂಗಳಿಗೆ 15 ಸಾವಿರ ರೂಪಾಯಿಗಳ ವೇತನವಿದ್ದು ಭಾರತದಲ್ಲಿ ಇದು 8000 ರೂಪಾಯಿಗಳಾಗಿದೆ ಎಂದೂ ಅವರು ಹೇಳಿದರು. ಹರಿದ್ವಾರದಲ್ಲಿ ತೆರಿಗೆ ಮುಕ್ತ ಕೈಗಾರಿಕಾ ಪ್ರದೇಶವಿದ್ದು ಇದರಲ್ಲಿ 2020 ರ ವರೆಗೆ ತೆರಿಗೆ ವಿನಾಯ್ತಿ ಇದೆ ಎಂದರು.
ಭಾರತದಲ್ಲಿ ಹ್ಯಾಂಡ್ ಸೆಟ್ ಗಳ ಉತ್ಪಾದನೆಯಿಂದ ಶೇ 10 ರಿಂದ 15 ರಷ್ಟು ಹಣ ಉಳಿತಾಯವಾಗಲಿದೆ ಎಂದು ಅವರು ಹೇಳಿದರು. ಉತ್ಪಾದನಾ ಘಟಕ ವಾರ್ಷಿಕ 3.6 ಮಿಲಿಯನ್ ಹ್ಯಾಂಡ್ ಸಎಟ್ ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು ಬ್ಯಾಟರಿ ತಯಾರಿಕೆ ಘಟಕ ವಾರ್ಷಿಕ 30 ಮಿಲಿಯನ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ.
2012 ಕ್ಕೆ ಕಂಪೆನಿಯ ನೌಕರರ ಸಂಖ್ಯೆಯನ್ನು ಈಗಿನ 2500 ರಿಂದ 16,000 ಕ್ಕೆ ಹೆಚ್ಚಿಸಲಾಗುವುದು ಎಂದರಲ್ಲದೆ ಮುಂದಿನ ಎರಡು ವರ್ಷಗಳಲ್ಲಿ ಕಂಪೆನಿಯ ಆದಾಯವನ್ನು ಈಗಿನ 1450 ಕೋಟಿ ರೂಪಾಯಿಗಳಿಂದ ವಾರ್ಷಿಕ 2500 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದರು. ಈ ಘಟಕ ಸ್ಥಾಪನೆಯಾದರೆ ಮ್ಯಾಕ್ಸ್ ಮೊಬೈಲ್ ದೇಶೀಯ ಮೊಟ್ಟ ಮೊದಲ ಮೊಬೈಲ್ ಹ್ಯಾಂಡ್ ಸೆಟ್ ತಯಾರಿಕಾ ಕಂಪೆನಿಯಾಗಲಿದೆ.












Click it and Unblock the Notifications