ಮಂಗಳೂರು ಎಸ್‌ಇಝಡ್ : 560 ನಿರ್ವಸಿತರಿಗೆ ಉದ್ಯೋಗ

ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ನಿರ್ವಸಿತರ ನಾಯಕರುಗಳ ಸಭೆಯಲ್ಲಿ ನಿರ್ವಸಿತರಿಗೆ ಉದ್ಯೋಗ ನೀಡುವ ಒಪ್ಪಂದಕ್ಕೆ ಬರಲಾಗಿದೆ.
ಅದರಂತೆ ವಿಶೇಷ ಆರ್ಥಿಕ ವಲಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 560 ಮಂದಿಗೆ ಉದ್ಯೋಗ ಕೊಡಲು ಸಮ್ಮತಿಸಲಾಯಿತು. ಉದ್ಯೋಗ ಬೇಡ ಎನ್ನುವವರಿಗೆ ನಗದು ಪರಿಹಾರ ಮೊತ್ತ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಉದ್ಯೋಗ ಬೇಡ ಎನ್ನುವವರು 7 ಲಕ್ಷ ರೂಪಾಯಿ ನಗದು ಪಡೆಯಲಿದ್ದಾರೆ.
ಈ ಮೂಲಕ ಕಳೆದ ಹದಿನಾಲ್ಕು ದಿನಗಳಿಂದ ನಿರ್ವಸಿತರು ನಡೆಸುತ್ತಿದ್ದ ಅಹೋರಾತ್ರಿ ಧರಣಿಗೆ ತೆರೆಬಿದ್ದಿದೆ. ಈ ಸಭೆಯಲ್ಲಿ ವಿಧಾನಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಭಯಚಂದ್ರ ಜೈನ್ ಸಹಿತ ಪ್ರಮುಖರಿದ್ದರು.












Click it and Unblock the Notifications