ಮತ್ತೆ ಕಾವೇರಿ ವಿವಾದ ಕೆಣಕಿದ ಜಯಲಲಿತಾ
ನವದೆಹಲಿ,
ಜೂನ್ 14: ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮಂಗಳವಾರ ಭೇಟಿ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾವೇರಿ ವಿವಾದವನ್ನು ಮತ್ತೆ ಕೆದಕಿದ್ದಾರೆ. ಇದೇ ವೇಳೆ, ಯುಪಿಎ ಮತ್ತು ಅಣ್ಣಾಡಿಎಂಕೆ ಮೈತ್ರಿಗೆ ಹೆಚ್ಚಿನ ಮಹತ್ವ ನೀಡದ ಜಯಾ ತಮ್ಮ ರಾಜ್ಯದ ಹಿತಾಸಕ್ತಿಗಾಗಿ 65 ಅಂಶಗಳ ಬೇಡಿಕೆಯನ್ನು ಸಲ್ಲಿಸಿದ್ದಾರೆ. id="toptextpromo">ಕರ್ನಾಟಕ
ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧದ 2007ರ ಐ ತೀರ್ಪು ತಮಗೆ ಸಮ್ಮತವಾಗಿದೆ. ಕರ್ನಾಟಕ ಅದಕ್ಕೆ ಸೂಕ್ತವಾಗಿ ಸ್ಪಂದಿಸಿ, ತಮಿಳುನಾಡಿಗೆ ನೀರು ಬಿಡಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸಿಂಗ್ ಗೆ ಜಯಲಲಿತಾ ಮನವಿ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>2
ಜಿ ಹಗರಣದಲ್ಲಿ ಸಿಕ್ಕಿರುವ ದಯಾನಿಧಿ ಮಾರನ್ ಮತ್ತು 2009 ಲೋಕಸಭೆ ಚುನಾವಣೆಯಲ್ಲಿ ಶಿವಗಂಗಾ ಕ್ಷೇತ್ರದಲ್ಲಿ ಚುನಾವಣೆ ಅಕ್ರಮವೆಸಗಿ ಜಯಗಳಿಸಿದ ಪಿ.ಚಿದಂಬರಂ ಅವರುಗಳನ್ನು ಸಂಪುಟದಿಂದ ಕೈಬಿಡಬೇಕು ಎಂದೂ ಜಯಾ ಆಗ್ರಹಿಸಿದ್ದಾರೆ.











Click it and Unblock the Notifications