ಹೈದರಾಬಾದ್ ಕ್ಷಿಪಣಿ ವಿಜ್ಞಾನಿಯ ಪುತ್ರನ ಅಪಹರಣ, ಹತ್ಯೆ
ಹೈದರಾಬಾದ್,
ಜೂನ್ 14: ಕಳೆದ ಶುಕ್ರವಾರ ಅಪಹರಣಕ್ಕೀಡಾಗಿದ್ದ 11 ವರ್ಷದ ಪ್ರಣವ್ ನ ದೇಹ ಸೋಮವಾರ ಗುಡಿಮಾಲ್ಕಾಪುರದಲ್ಲಿ ಚರಂಡಿ ಬಳಿ ಬ್ಯಾಗಿನಲ್ಲಿ ಪತ್ತೆಯಾಗಿದೆ. ಬಾಲಕನನ್ನು ಉಸಿರುಗಟ್ಟಿಸಿ ಸಾಯಿಸಲಾಗಿದ್ದು ದೇಹದ ಮೇಲೆ ಯಾವುದೇ ಗಾಯದ ಗುರುತು ಕಂಡುಬಂದಿಲ್ಲ. id="toptextpromo">ಪ್ರಣವನ
ಅಪ್ಪ ರಾಮಮೋಹನ್ ಡಿಆರ್ ಡಿಎಲ್ ಸಂಸ್ಥೆಯಲ್ಲಿ ಅಗ್ನಿ ಕ್ಷಿಪಣಿ ವಿಭಾಗದಲ್ಲಿ ವಿಜ್ಞಾನಿಯಾಗಿದ್ದಾರೆ. ಜೂನ್ 10ರಂದು ಅಪರಚಿತ ವ್ಯಕ್ತಿಗಳಿಂದ ತಮ್ಮ ಮಗನ ಅಪಹರಣದ ಬಗ್ಗೆ ದೂರವಾಣಿ ಕರೆ ಸ್ವೀಕರಿಸಿದ್ದರು. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದರಾದರೂ 'ಮಗು ಕಾಣೆಯಾಗಿದೆ' ಎಂದು ದೂರು ದಾಖಲಿಸಿಕೊಂಡು ಸುಮ್ಮನಾಗಿದ್ದರು. id='are-slot-1' class='oiad oi-axt oiadv'> id='top-searched-articles'>ರಾಮಮೋಹನ್
ಅವರು ಆಯಕಟ್ಟಿನ ವಿಭಾಗದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅವರ ಮಗನ ಅಪಹರಣ, ಹತ್ಯೆಗೆ ಈಗ ಹೆಚ್ಚಿನ ಮಹತ್ವ ನೀಡಲಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಶುಕ್ರವಾರ 12.15ರಲ್ಲಿ ಅಪರಿಚಿತ ದೂರವಾಣಿ ಕರೆಗೆ ಓಗೊಟ್ಟ ಪ್ರಣವ್, ಮನೆಯಿಂದ ಹೊರಹೋಗಿದ್ದ. ಆ ವೇಳೆ ಮನೆಯಲ್ಲಿ ಆತನ ಸೋದರಿ ಮಾತ್ರವೇ ಇದ್ದಳು.











Click it and Unblock the Notifications