ಆನೆ ಓಡಿಸುವ ಪಟಾಕಿಯಲ್ಲೂ ಅವ್ಯವಹಾರ ಸ್ವಾಮಿ...

ಆನೆ ಓಡಿಸುವ ಪಟಾಕಿಯಲ್ಲೂ ಅವ್ಯವಹಾರ
ಹಾಸನ ಜೂ 14: ದುಡ್ಡಿದ್ದವನೇ ದೊಡ್ಡಪ್ಪ. ಕಾಂಚಾಣ ಯಾವ ರೂಪದಲ್ಲಿ ಬಂದರೇನು? 2005 ರಿಂದ ಇದುವರೆಗೆ ಅರಣ್ಯ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಕಳೆದ ಆರು ವರ್ಷಗಳಲ್ಲಿ ಸುಮಾರು 20 ಕೋಟಿ ರೂಪಾಯಿಷ್ಟು ಅವ್ಯವಹಾರ ನಡೆದಿದೆ. ಆನೆ ಓಡಿಸುವ ಪಟಾಕಿಯಲ್ಲೂ ಲಕ್ಷ ಲಕ್ಷ ನುಂಗಿದ್ದಾರೆ. ರಾಜ್ಯ ಸರಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕಾಂಗ್ರೆಸ್ ಮುಖಂಡ ಶೇಷೆಗೌಡ ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯ ಹಿಂದಿನ ಕೆಲವು ಹಿರಿಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. 2005 -2011 ರ ಅವಧಿಯಲ್ಲಿ ಆನೆಗಳನ್ನು ಓಡಿಸಲು ಪಟಾಕಿ ಖರೀದಿಗೆ ಇಲಾಖೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದೆ. ಕೇಂದ್ರದಿಂದ ಬಂದ ಅನುದಾನದಲ್ಲಿ ಶೇ. 20ರಷ್ಟು ಮಾತ್ರ ಬಳಕೆಯಾಗಿದೆ. ದಿನಗೂಲಿ ನೌಕರರ ನೇಮಕಾತಿ ವಿಚಾರದಲ್ಲೂ ಅವ್ಯವಹಾರ ಮಾಡಲಾಗಿದೆ. ಒಟ್ಟಾರೆ ಇಪ್ಪತ್ತು ಸಾವಿರ ಉದ್ಯೋಗ ಸೃಷ್ಟಿ ಮಾಡಿ ನಕಲಿ ಸಹಿ ಬಳಸಿ ಅಧಿಕಾರಿಗಳೇ ಹಣ ನುಂಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆರೋಪಿಸಿದ್ದಾರೆ.

2005 ರಿಂದ ಇದುವರೆಗೆ ಮೂರು ಬಾರಿ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ನಡೆದಿದೆ. ಆನೆಗಳಿಗೆ ಕಟ್ಟುವ ಹಗ್ಗ ಖರೀದಿಗೆ 84 ಲಕ್ಷ ರೂಪಾಯಿ ವ್ಯಯಿಸಲಾಗಿದೆ. ಯಾವುದೇ ಟೆಂಡರ್ ಇಲ್ಲದೆ ಮೈಸೂರಿನ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದೆ ಎಂದು ಗೌಡ ಆರೋಪಿಸಿದ್ದಾರೆ.

ಕಾಡಾನೆ ಸೆರೆ ಹಿಡಿಯಲು ಪಳಗಿದ ಆನೆಗಳನ್ನು ಬಳಸ ಬೇಕಾಗುತ್ತದೆ. ಇಂತಹ ಆನೆಗಳನ್ನು ಮೈಸೂರು ಅಥವಾ ಬಂಡೀಪುರದಿಂದ ಕರೆ ತರಬೇಕು. ಆನೆಗಳನ್ನು ಕರೆ ತರಲು ಭಾರೀ ವೆಚ್ಚ ತೋರಿಸಲಾಗಿದೆ. ಮಾವುತರ ಶೆಲ್ಟರ್ ನಿರ್ಮಾಣಕ್ಕೆ, ಅವರ ಊಟ ಉಪಚಾರಕ್ಕೆ, ಹಾಸಿಗೆ ದಿಂಬು ಖರೀದಿ ಇತ್ಯಾದಿಗೆ ಲಕ್ಷ ಲಕ್ಷ ವೆಚ್ಚ ತೋರಿಸಲಾಗಿದೆ. ಸರಕಾರದಿಂದ ಬರುವ ಹಣ ಅಧಿಕಾರಿಗಳ ಜೇಬು ಸೇರಿದೆಯೇ ವಿನಃ ಕಾಡಂಚಿನ ಜನ ಕಾಡುಪ್ರಾಣಿಗಳ ದಾಳಿಗೆ ಹೆದರಿ ಜೀವನ ನಡೆಸುತ್ತಿದ್ದಾರೆಂದು ಶೇಷೆಗೌಡ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+