ಭ್ರಷ್ಟರ ವಿರುದ್ಧ ಸಮರ: ಚೀನಾಗೆ ಜನಾಗ್ರಹ ಮಾದರಿ

ಜನಾಗ್ರಹ ಆರಂಭಿಸಿದ್ದ 'I Paid a Bribe' ಮಾದರಿಯಲ್ಲೇ "I Made a Bribe" ಎಂಬ ವೆಬ್ ಆಂದೋಲನವನ್ನು ಚೀನಿಯರು ಶುರು ಮಾಡಿದ್ದಾರೆ. www.ibribery.com ಮೂಲ ವೆಬ್ ತಾಣದ ಮೂಲಕ ಭ್ರಷ್ಟಾಚಾರದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಸ್ವಚ್ಛ, ಸುಂದರ ಚೀನಾ ರೂಪಿಸಲು ಆಲ್ಲಿನ ವೆಬ್ ಸಂಘಟಕರು ಇಚ್ಛಿಸಿದ್ದಾರೆ. ಜನಾಗ್ರಹದ ವೆಬ್ ಪುಟದಲ್ಲಿ ಸರ್ಕಾರಿ ಅಧಿಕಾರಿಗಳ ಜಾಲಕ್ಕೆ ಸಿಲುಕಿ ಲಂಚ ನೀಡಬೇಕಾದ ಪ್ರಸಂಗಗಳು, ಭ್ರಷ್ಟ ಅಧಿಕಾರಿಗಳ ವರ್ತನೆ, ಸಾರ್ವಜನಿಕರ ನೋವು, ಹೋರಾಟದ ಕಥೆಗಳಿವೆ.
ಚೀನಾದ ಕಮ್ಯೂನಿಸ್ಟ್ ಸರ್ಕಾರ ಕೂಡಾ ಭ್ರಷ್ಟಾಚಾರ ದೇಶದ ಪ್ರಮುಖ ಶತ್ರು ಎಂದು ಘೋಷಿಸಿದೆ. 2010ರಲ್ಲಿ ಟ್ರಾನ್‌ಸ್ಪರೆನ್ಸಿ ಇಂಟರ್ ನ್ಯಾಷನಲ್ ನಡೆಸಿದ ಸಮೀಕ್ಷೆ ಪ್ರಕಾರ ಚೀನಾದಲ್ಲಿ ಭ್ರಷ್ಟಾಚಾರ ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದು, 178 ಭ್ರಷ್ಟ ರಾಷ್ಟ್ರಗಳ ಸಾಲಿನಲ್ಲಿ ಚೀನಾ 78 ನೇಸ್ಥಾನದಲ್ಲಿದ್ದರೆ, ಭಾರತ 87 ನೇ ಸ್ಥಾನದಲ್ಲಿದೆ.
www.522phone.com ಎಂಬ ಇನ್ನೊಂದು ವೆಬ್ ತಾಣ ಕೂಡಾ ಇದೇ ರೀತಿ ಅಭಿಯಾನ ನಡೆಸುತ್ತಿದ್ದು, ಇತ್ತೀಚೆಗೆ ಭಾರಿ ಲಂಚ ನೀಡಿದ ವ್ಯಾಪಾರಿಯೊಬ್ಬನ ಕಥೆ ಪ್ರಕಟಿಸಿದೆ 3 ಮಿಲಿಯನ್ ಯಾನ್ (ರು.2.1 ಕೋಟಿ) ನೀಡಿ ಗುತ್ತಿಗೆ ಪಡೆದಿದ್ದ ವ್ಯಾಪಾರಿ ನಾನು ವ್ಯವಸ್ಥೆಯ ಕೈಗೊಂಬೆ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.
ನಮ್ಮ ಐಡಿಯಾ ಕದ್ದು, ಭ್ರಷ್ಟರನ್ನು ಓಡಿಸುವ ಚೀನಿಯರ ಯೋಜನೆ ಯಶಸ್ವಿಯಾಗಲಿ. ಸೋಮವಾರ ನಮ್ಮ ವೆಬ್ ತಾಣಕ್ಕೆ ಚೀನಾ ಕಡೆಯಿಂದ ಸುಮಾರು 20 ಸಾವಿರಕ್ಕೂ ಅಧಿಕ ಹಿಟ್ಸ್ ಬಂದಿತ್ತು. ಇದರ ಮೂಲ ಹುಡುಕಿದಾಗ ಚೀನಿಯರ ವೆಬ್ ತಾಣದಲ್ಲಿ ನಮ್ಮ ಮಾದರಿ ಅಳವಡಿಸಿರುವ ಸಂಗತಿ ತಿಳಿಯಿತು. ಪ್ರಜಾಪ್ರಭುತ್ವ ಆಧಾರಿತ ಈ ಹೋರಾಟ ಕಮ್ಯೂನಿಸ್ಟ್ ದೇಶಕ್ಕೆ ರಫ್ತು ಆಗುತ್ತಿರುವುದು ಸಂತೋಷದ ವಿಷಯ ಎಂದು ಜನಾಗ್ರಹದ ವೆಬ್ ಸಂಚಾಲಕ ಟಿಆರ್ ರಘುನಂದನ್ ಪ್ರತಿಕ್ರಿಯಿಸಿದ್ದಾರೆ.











Click it and Unblock the Notifications