ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಶೂಟಿಂಗ್ ಅಕಾಡೆಮಿ ಆರಂಭಿಸಿದ ಸಚಿವೆ ಶೋಭಾ

By Mahesh
|
Google Oneindia Kannada News

ಬೆಂಗಳೂರು ಜೂ 13: ಕಳೆದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಶೂಟಿಂಗ್‌ನಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕ ತಂದಿತ್ತಾಗ ದೇಶದೆಲ್ಲೆಡೆ ಶೂಟಿಂಗ್ ಬಗ್ಗೆ ವಿಶೇಷ ಗಮನ ಹರಿಯಿತು. ದೇಶದ ಹಲವು ಮಹಾನಗರಗಳಲ್ಲಿ ಅತ್ಯುತ್ತಮ ತರಬೇತಿ ನೀಡುವ ಖಾಸಗಿ ಶೂಟಿಂಗ್ ರೇಂಜ್‌ಗಳು ಇರುವುದು ಬೆಳಕಿಗೆ ಬಂತು. ಉದ್ಯಾನ ನಗರಿಯಲ್ಲಿ ಇದರ ಕೊರತೆ ಎದ್ದು ಕಾಣಿಸಿತ್ತು. ಆ ಕೊರತೆ ಇದೀಗ ನಿವಾರಣೆಯಾಗಿದೆ. ಶೂಟಿಂಗ್ ರೇಂಜ್ ಆಸಕ್ತರನ್ನು ಕೈಬೀಸಿ ಕರೆಯತೊಡಗಿದೆ.

ಬಿಎಸ್‌ಎಫ್‌ನ ಶೂಟಿಂಗ್ ತಂಡದಲ್ಲಿದ್ದ ಅಂತಾರಾಷ್ಟ್ರೀಯ ಶೂಟರ್ ಮಂಜುನಾಥ ಪಟ್ಟೇಗಾರ್, ನೆಲಮಂಗಲದ ಪುರುಷೋತ್ತಮ ಸೇರಿದಂತೆ ಐವರು ಕ್ರೀಡಾಪಟುಗಳ ನೇತೃತ್ವದಲ್ಲಿ ನಗರದ ಬಿಟಿ.ಎಂ ಬಡಾವಣೆಯ ಮೈಕೋ ಲೇಔಟ್‌ನಲ್ಲಿ ಇದೀಗ ರಾಜ್ಯದ ಪ್ರಥಮ ಖಾಸಗಿ ಶೂಟಿಂಗ್ ಅಕಾಡೆಮಿ "ನಿಶಾನ್ ಶೂಟಿಂಗ್ ಸ್ಫೋರ್ಟ್ಸ್ ಅಕಾಡೆಮಿ" ಆರಂಭವಾಗಿದೆ.

ಆಧುನಿಕ ತರಬೇತಿ: 2200 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಈ ಶೂಟಿಂಗ್ ತರಬೇತಿ ರೇಂಜ್ ಇದ್ದು, ಜರ್ಮನಿಯಿಂದ ತರಿಸಿದ .1774.5 ಕ್ಯಾಲಿಬರ್ ಏರ್ ರೈಫಲ್ ಮತ್ತು ಏರ್ ಪಿಸ್ತೂಲ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಗೆ ಅನುಗುಣವಾಗಿ ಹಾಗೂ ಖ್ಯಾತ ಅಕಾಡೆಮಿಗಳು ನೀಡುವ ತರಬೇತಿಗೆ ತಕ್ಕಂತೆ 10 ಮೀಟರ್ ಅಂತರದಿಂದ ಶೂಟಿಂಗ್ ನಡೆಸುವ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ತರಬೇತಿ ವೇಳೆ ಪ್ರತಿ ದಿನ ಒಬ್ಬ ಅಭ್ಯರ್ಥಿಗೆ 50 ಏರ್ ಪಿಲೆಟ್ಸ್ ನೀಡಲಾಗುತ್ತದೆ.

ಇಲ್ಲಿ ಬಳಸುವ ಗುಂಡು ಬುಲೆಟ್ ಅಲ್ಲ. ಅದು ಏರ್ ಪಿಲೆಟ್. ಈ ಏರ್ ಪಿಲೆಟ್ ಚಪ್ಪಟೆಯಾಗಿದೆ. ಶೂಟಿಂಗ್ ಕ್ರೀಡೆಯಲ್ಲಿ ಬಳಸುವುದು ಇಂತಹ ಗುಂಡನ್ನೇ. ಸ್ವಯಂಚಾಲಿತವಾಗಿ ಟಾರ್ಗೆಟ್ ಪೇಪರ್ ಅನ್ನು ನಿಗದಿತ ಸ್ಥಳಕ್ಕೆ ಕೊಂಡೊಯ್ದು ಮರಳಿ ತರುವ ಸಾಮರ್ಥ್ಯದ ಟಾರ್ಗೆಟ್ ಚೇಂಜಿಂಗ್ ಪುಲ್ಲಿ ಯಂತ್ರವನ್ನು ಇಲ್ಲಿ ಬಳಸಲಾಗುತ್ತಿದೆ.

ಏರ್ ಪಿಲೆಟ್ ಕಟ್ಟಡದಿಂದ ಯಾವುದೇ ಕಾರಣಕ್ಕೆ ಹೊರಗೆ ಹೋಗದಂತೆ ವಿಶೇಷ ಎಚ್ದರ ವಹಿಸಲಾಗಿದೆ. ಮರದ ಹೊದಿಕೆ ಮಾತ್ರವಲ್ಲದೆ, ಗಟ್ಟಿ ಲೋಹ ಅಳವಡಿಸಲಾಗಿದೆ. ಗುಂಡಿನ ಶಬ್ದ ಬಾರದಂತೆ ವಿಶೇಷ ಶಬ್ದ ನಿರೋಧಕ ತಂತ್ರಜ್ಞಾನ ಅಳವಡಿಸಲಾಗಿದೆ. ಇಲ್ಲಿ ಏಕಕಾಲದಲ್ಲಿ ಹತ್ತು ಮಂದಿ ತರಬೇತಿ ಪಡೆಯಬಹುದು.

ಈ ಶೂಟಿಂಗ್ ಅಕಾಡೆಮಿಯನ್ನು 1960ರ ಸಂಘ ಸಂಸ್ಥೆಗಳ ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದು ಕರ್ನಾಟಕ ರಾಜ್ಯ ರೈಫಲ್ಸ್ ಅಸೋಸಿಯೇಷನ್‌ಗೆ ಒಳಪಡಲಿದೆ. ಅಕಾಡೆಮಿಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಏರ್ ರೈಫಲ್‌ಗಳಿಗೆ ಪರವಾನಗಿ ಅಗತ್ಯವಿಲ್ಲ. ಇಲ್ಲಿ ಬಳಸುವ ಶೂಟಿಂಗ್ ಗನ್‌ಗಳು ಶಸ್ತ್ರಾಸ್ತ್ರ ಕಾಯ್ದೆ ಅಡಿ ಬರುವುದಿಲ್ಲ.

ಮುಂಬೈಯಲ್ಲಿ 289 ಖಾಸಗಿ ಶೂಟಿಂಗ್ ರೇಂಜ್‌ಗಳಿವೆ. ಆದರೆ ಬೆಂಗಳೂರಿನಲ್ಲಿ ಒಂದು ಖಾಸಗಿ ಶೂಟಿಂಗ್ ರೇಂಜ್ ಇಲ್ಲಿಯ ತನಕ ಇರಲಿಲ್ಲ. ಇದೀಗ ಈ ಸ್ಫೋರ್ಟ್ಸ್ ಶೂಟರ್‌ಗಳ ತಂಡ ಈ ದೊಡ್ಡ ಕೊರತೆ ನೀಗಿಸಿದೆ. ಶೂಟಿಂಗ್‌ನಲ್ಲಿ ತರಬೇತಿ ಪಡೆದು ಸಾಧನೆ ಮಾಡಬೇಕು ಎಂದು ಬಯಸಿದವರ ಕನಸು ಈಡೇರುವುದು ಸಾಧ್ಯವಾಗಿದೆ.

ಹೆಚ್ಚಿನ ಮಾಹಿತಿಗೆ : ನಿಶಾನ್ ಸ್ಪೋರ್ಟ್ಸ್ಸ್ ಶೂಟಿಂಗ್ ಅಕಾಡೆಮಿ, ನಂ 18, ಬಿ.ಎಂ.ಆರ್.ಸಂಕೀರ್ಣ, ಮೊದಲನೇ ಮಹಡಿ, 6ನೇ ಮುಖ್ಯ ರಸ್ತೆ, ಮೊದಲನೇ ಕ್ರಾಸ್, ಮೈಕೋ ಲೇಔಟ್, ಬಿಟಿಎಂ ಎರಡನೇ ಹಂತ, ಬೆಂಗಳೂರು-76

English summary
Karnataka's first private shooting range launched by Energy minister Shobha Karandlaje. The Shooting academy is going to be affiliated to Karnataka State Rifles Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X