ವರದಕ್ಷಿಣೆ ಭೂತ: ಮದುವೆಯಾದ ಹತ್ತೇ ತಿಂಗಳಲ್ಲಿ ನೇಣಿಗೆ
ಬೆಂಗಳೂರು,
ಜೂನ್ 10: ವರದಕ್ಷಿಣೆ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೆ.ಪಿ.ನಗರ ಸಮೀಪದ ಜರಗನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದೆ. ಪ್ರಶಾಂತ್ ಎಂಬುವರ ಪತ್ನಿ ಶೀಲಾ (27) ಆತ್ಮಹತ್ಯೆ ಮಾಡಿಕೊಂಡವರು. 10 ತಿಂಗಳ ಹಿಂದೆಯಷ್ಟೇ ಅವರ ವಿವಾಹವಾಗಿತ್ತು. id="toptextpromo">ಹಣಕಾಸು
ಲೇವಾದೇವಿ ಮಾಡುವ ಪ್ರಶಾಂತ್ ಮತ್ತು ಆತನ ತಾಯಿ ಅರುಣಾ ಕುಮಾರಿ ಅವರು ಶೀಲಾಗೆ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ಅವರು ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂಬುದಾಗಿ ಜೆ.ಪಿ.ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವರದಕ್ಷಿಣೆ
ತರುವಂತೆ ಪ್ರಶಾಂತ್ ಮತ್ತು ಅರುಣಾ ಕುಮಾರಿ ಅವರು ಸಹೋದರಿಗೆ ಪೀಡಿಸುತ್ತಿದ್ದರು. ಅಲ್ಲದೇ ಸೋದರಿಗೆ ಮನೆಯಿಂದ ಹೊರ ಹೋಗಲು ಅವಕಾಶ ನೀಡದೆ ಮಾನಸಿಕ ಹಿಂಸೆ ನೀಡುತ್ತಿದ್ದರು. ತಾಯಿಯ ಜತೆ ಸೇರಿಕೊಂಡು ಪ್ರಶಾಂತನೇ ನನ್ನ ಸೋದರಿಯನ್ನು ಕೊಲೆ ಮಾಡಿ ನೇಣು ಹಾಕಿದ್ದಾನೆ' ಎಂದು ಶೀಲಾ ಅವರ ಸಹೋದರ ವೆಂಕಟೇಶ್ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಂತರ ಪ್ರಶಾಂತ್ ತಲೆಮರೆಸಿಕೊಂಡಿದ್ದಾನೆ. ಆತನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜೆಪಿ ನಗರ ಪೊಲೀಸರು ತಿಳಿಸಿದ್ದಾರೆ











Click it and Unblock the Notifications