ವೃತ್ತಿಪರ ಕೋರ್ಸ್ ಗೊಂದಲ ಮುಕ್ತಾಯ, ಕೌನ್ಸೆಲಿಂಗ್ ಆರಂಭ

ಉನ್ನತ ಶಿಕ್ಷಣ ಸಚಿವ ಡಾ. ವಿಎಸ್ ಆಚಾರ್ಯ ಅವರ ಸಮ್ಮುಖದಲ್ಲಿ ಕನ್ಸಾರ್ಷಿಯಮ್ ಆಫ್ ಮೆಡಿಕಲ್, ಇಂಜಿನಿಯರಿಂಗ್ ಮತ್ತು ಡೆಂಟಲ್-ಕರ್ನಾಟಕ (ಕಾಮೆಡ್-ಕೆ) ಮತ್ತು ಸರಕಾರಗಳು 50:50 ಅನುಪಾತದಲ್ಲಿ ಸೀಟು ಹಂಚಿಕೊಳ್ಳಲು ಇಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದವು.
50 ಅನುಪಾತದಲ್ಲಿ ಶೇ.45ರಷ್ಟು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮುಖಾಂತರ ಸೀಟು ಭರ್ತಿ ಮತ್ತು ಶೇ.5ರಷ್ಟು ಬಡಮಕ್ಕಳ ಕೋಟಾ ಒಳಗೊಂಡಿದೆ. ಈ ವರ್ಷ ಒಟ್ಟು 60 ಸಾವಿರ rank ನೀಡಲಾಗಿದ್ದು, ಇಂದಿನಿಂದ ಕೌನ್ಸೆಲಿಂಗ್ ಪ್ರಾರಂಭವಾಗಲಿದೆ ಎಂದು ಆಚಾರ್ಯ ತಿಳಿಸಿದರು.
ಖಾಸಗಿ ಕಾಲೇಜುಗಳು ಇಂಜಿನಿಯರಿಂಗ್ ಸೀಟಿಗೆ ಸರಕಾರಿ ಕೋಟಾದಡಿಯಲ್ಲಿ 35 ಸಾವಿರ ರು. ಮತ್ತು ಕಾಲೇಜು ಕೋಟಾದಡಿಯಲ್ಲಿ 1.25 ಲಕ್ಷ ರು.ಗಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ. ಕಾಮೆಡ್-ಕೆ ಇನ್ನೂ ಶುಲ್ಕ ನಿಗದಿಯ ಬಗ್ಗೆ ವಿವರ ನೀಡಿಲ್ಲ.











Click it and Unblock the Notifications