2ಜಿ ಹಗರಣದಲ್ಲಿ ಚಿದಂಬರಂ ಸಹ ಭಾಗಿ: ಗಡ್ಕರಿ ಬಳಿ ಸಾಕ್ಷ್ಯ

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಆರೋಪ ಮಾಡಿರುವ ನಿತಿನ್ ಗಡ್ಕರಿ, 2ಜಿ ಪ್ರಕರಣದಲ್ಲಿ ಕೇಂದ್ರ ಸಚಿವ ಚಿದಂಬರಂ ಭಾಗಿಯಾಗಿರುವ ಕುರಿತು ತಮ್ಮಲ್ಲಿ ಸಾಕ್ಷ್ಯಗಳಿವೆ. ಶೀಘ್ರವೇ ಈ ಸಾಕ್ಷ್ಯಗಳನ್ನು ಬಹಿರಂಗ ಮಾಡಲಿರುವುದಾಗಿ ಹೇಳಿದ್ದಾರೆ.
ಈ ಸಾಕ್ಷ್ಯಗಳನ್ನು ಬಹಿರಂಗ ಮಾಡಿದ ಬಳಿಕ ಈ ಕುರಿತು ತನಿಖೆ ನಡೆಸುವಂತೆ ಸಿಬಿಐ ಅನ್ನು ಕೋರಲಾಗುವುದು. ದೇಶದ ಜನರಿಗೆ ಚಿದಂಬರಂ ಮಾಡಿರುವ ಅನ್ಯಾಯದ ಕುರಿತು ತನಿಖೆ ಆಗಲೇ ಬೇಕು ಎಂದು ಗಡ್ಕರಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಮುರಳಿ ಮನೋಹರ್ ಜೋಶಿ ಕೂಡ ಚಿದಂಬರಂ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ, ಹಗರಣದಲ್ಲಿ ಭಾಗಿಯಾಗಿರುವ ಸಚಿವರನ್ನು ಕೈ ಬಿಡಿ ಎಂದು ಪ್ರಧಾನಿ ಸಿಂಗ್‌ಗೆ ಸವಾಲು ಹಾಕಿದ್ದರು.











Click it and Unblock the Notifications