ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ! ಹಂಪಿ ದೇಗುಲಗಳಲ್ಲಿ ಸಿಸಿಟಿವಿ ಇದೆ

By * ರೋಹಿಣಿ, ಬಳ್ಳಾರಿ
|
Google Oneindia Kannada News

CCTV camera Hampi Temples
ಬಳ್ಳಾರಿ, ಜೂ. 9: ಹಂಪೆಯ ವಿವಿಧ ಸ್ಮಾರಕಗಳನ್ನು ಮತ್ತು ಹಂಪೆಯ ಪರಿಸರ ಸಂರಕ್ಷಣೆಗಾಗಿ 2.17 ಕೋಟಿ ರುಪಾಯಿ ವೆಚ್ಚದಲ್ಲಿ 30ಕ್ಕೂ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಹಂಪೆ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಯೋಜನೆಯನ್ನು ರೂಪಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಮೊದಲ ಹಂತದಲ್ಲಿ 47 ಲಕ್ಷ ರುಪಾಯಿ ವೆಚ್ಚದಲ್ಲಿ ಕಮಲಾಪುರದಿಂದ ಹಂಪೆಯ ಪ್ರವೇಶ ದ್ವಾರದ ಬಳಿ, ಕಮಲ್ ಮಹಲ್, ಮಾತಂಗ ಪರ್ವತ, ವಿರೂಪಾಕ್ಷ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಿಸಿ ಕ್ಯಾಮರಾವನ್ನು ಈಗಾಗಲೇ ಅಳವಡಿಸಲಾಗಿದೆ. ಈ ಕ್ಯಾಮರಾಗಳ ಬಳಕೆಯಿಂದ ಹಂಪೆಯ ಪರಿಸರ ಸಂರಕ್ಷಣೆ, ಪ್ರವಾಸಿಗರ ಭದ್ರತೆ ಇನ್ನಿತರೆ ಉದ್ದೇಶಗಳು ಈಡೇರಿವೆ.

ಎರಡನೇ ಹಂತವಾಗಿ ರಾಣಿ ಸ್ನಾನಗೃಹ, ನೆಲ ಶಿವ ದೇಗುಲ, ಉಗ್ರ ನರಸಿಂಹ, ಹೇಮಕೂಟ, ಹಂಪೆ ಪ್ರವೇಶ ದ್ವಾರ, ಪುರಂದರದಾಸರ ಮಂಟಪ, ಗೆಜ್ಜಲ ಮಂಟಪ, ಹಂಪೆ ಹಿಂಭಾಗದ ಗೇಟ್, ರಾಮನಗರ ಪ್ರದೇಶ, ಕಡ್ಡಿರಾಂಪುರ ಪ್ರವೇಶ ದ್ವಾರ, ಕಡ್ಡಿರಾಂಪುರ ಗೋರಿ ಪ್ರದೇಶ, ಹಂಪೆ ನದಿ ತೀರ, ಆನೆಗೊಂದಿ ಗೇಟ್, ನೋಬಲ್ ಕ್ವಾರ್ಟಸ್, ಚಕ್ರತೀರ್ಥ, ಮಾಲ್ಯವಂತ, ಪ್ರಕಾಶ ನಗರ, ಕಡ್ಡಿರಾಂಪುರ ಗ್ರಾಮ, ಆನೆಗೊಂದಿ ದುರ್ಗಾ ದೇವಿ ಗುಡಿ, ಆನೆಗೊಂದಿ ಹಿಲ್ ವೆಸ್ಟ್, ಕಡೆ ಬಾಗಿಲು, ಪಂಪಾ ಸರೋವರ, ಅಂಜನಾದ್ರಿ ಬೆಟ್ಟ, ಸಣಾಪುರ ಗ್ರಾಮ, ವಿರೂಪಾಪುರ ಗಡ್ಡೆ ಸೇರಿದಂತೆ ಒಟ್ಟು 27 ಕಡೆ 1.70 ಕೋಟಿ ರೂ. ವೆಚ್ಚದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಉದ್ಧೇಶಿಸಲಾಗಿದೆ.

ಹಂಪೆಗೆ ಆಗಮಿಸುವ ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾ ಇರಿಸಲು ಈ ಸಿಸಿ ಕ್ಯಾಮರಾಗಳು ನೆರವಾಗಲಿವೆ. ಹಗಲು-ರಾತ್ರಿ ಈ ಕ್ಯಾಮರಾ ಕಾರ್ಯ ನಿರ್ವಹಿಸುವದರಿಂದ ಪ್ರತಿಯೊಂದು ಇಲ್ಲಿ ದಾಖಲಾಗುತ್ತದೆ. ಭಯೋತ್ಪಾದಕ ಕೃತ್ಯ, ಕಳ್ಳತನ, ಅನೈತಿಕ ಚಟುವಟಿಕೆ ತಡೆಯಲು ಈ ಸಿಸಿ ಕ್ಯಾಮರಾಗಳು ಪೂರಕವಾಗಿವೆ ಎಂದು ಪ್ರಾಧಿಕಾರ ತಿಳಿಸಿದೆ.

English summary
In order to curb the illegal activities in World Heritage Center Hampi CCTV Camera to be installed in over 30 temples at a cost of Rs 2.17 Cr said Hampi Development Authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X