ಯೋಗ ಗುರು ರಾಮದೇವ್ ಆಸ್ತಿ ಮೂಲ ಯಾವುದು?

ಈಗ ಮತ್ತೊ ಬಾಬಾ ರಾಮ್‌ದೇವ್ ರ ಮತ್ತು ವಿದೇಶದಲ್ಲಿರುವ ಕಪ್ಪು ಹಣದ ವಿರುದ್ಧ ನಿ ಎತ್ತಿವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಮೊದಲನೆಯದು, ಈಗಾಗಲೇ ಜನಲೋಕಪಾಲ್ ರಚನೆ ಬಗ್ಗೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ ಅವಶ್ಯವೇ? ಜನಲೋಕಪಾಲ್ ಸಮಿತಿಯ ಸದಸ್ಯ ರೊಡನೆ ಚರ್ಚಿಸಿ ವಿದೇಶದಲ್ಲಿರುವ ಕಪ್ಪು ಹಣ ತರಿಸಲು ಬಾಬಾ ರಾಮ್ ದೇವ್ ಪ್ರಯತ್ನಿಸಬಹುದಲ್ಲವೇ? ಈ ಉಪವಾಸ ಸತ್ಯಾಗ್ರಹ ಏಕೆ? ಇದರ ಹಿಂದಿನ ಸಂಚು ಏನು? ಮಾಧ್ಯಮಗಳಿಂದ ಪ್ರಚಾರ ಪಡೆಯುವುದೇ? ವಿದೇಶಿ ಬ್ಯಾಂಕುಗಳು ಸುಲಭವಾಗಿ ಭಾರತ ಸರಕಾರದ ಆದೇಶಗಳನ್ನು ಪಾಲಿಸಲು ಸಾಧ್ಯವೇ?
ಆ ದೇಶಗಳಲ್ಲಿ ತಮ್ಮದೇ ಆದ ಕಾನೂನುಗಳಿಲ್ಲವೇ? ಈ ವಿಷಯಗಳಿಂತ ಮುಖ್ಯವಾದುದು, ಬಾಬಾ ರಾಮ್‌ದೇವ್‌ರವರ ಆಸ್ತಿಯ ಮೂಲ ಯಾವುದು? ಒಂದು ಅಂದಾಜಿನ ಪ್ರಕಾರ ಬಾಬಾ ರಾಮ್‌ದೇವ್ ಮತ್ತು ಇವರ ಸಂಸ್ಥೆ ಸುಮಾರು 1100 ಕೋಟಿ ರೂಪಾಯಿ ಮೌಲ್ಯದಷ್ಟು ಆಸ್ತಿಯನ್ನು ಹೊಂದಿದೆ. ಇದಕ್ಕೆ ಮೂಲ ಯಾವುದು? ಇವರಿಗೆ ದಾನ ಮಾಡಿದ ಮಹಾ ಪುರುಷರು ಯಾರು? ಅಷ್ಟು ಹಣಕ್ಕೂ ತೆರಿಗೆ ಕಟ್ಟಲಾಗಿದೆಯೇ? ಅವರು ಹಣ ಸಂಪಾದಿಸಲು ಅನುಸರಿಸಿದ ಮಾಡಿದ ದಾರಿಗಳು ಯಾವುವು? ಭ್ರಷ್ಟರಿಂದ, ಕಾರ್ಪೋರೇಟ್ ಸಂಸ್ಥೆಗಳಿಂದ ಹಣ ಪಡೆಯುವುದು ಸರಿಯೇ? ಅದು ಭ್ರಷ್ಟತೆಯಲ್ಲವೇ? ಏಕೆ ಇವರಿಗೆ 1100 ಕೋಟಿ ರೂಪಾಯಿ ಆಸ್ತಿ ? ಆದರಿಂದ ಜನಸಾಮಾನ್ಯರಿಗೆ ಮಾಡಿರುವ ಅನುಕೂಲಗಳೇನು?
ಬಾಬಾ ರಾಮದೇವ್ ತಮ್ಮ ಆಸ್ತಿ ವಿವರಗಳನ್ನು ಇಂದು ಸಾರ್ವಜನಿಕರಿಗೆ ಬಹಿರಂಗಪಡಿಸುತ್ತಿದ್ದಾರೆ. ಆದರೆ ಅದರ ಮೂಲಗಳನ್ನು ಕೇಂದ್ರ ಸರಕಾರ ಈ ಹಣದ ಮೂಲದ ಬಗ್ಗೆ ತನಿಖೆ ನಡೆಸಿ ಬಾಬಾ ರಾಮ್‌ದೇವ್‌ರಂಥವರನ್ನು ಜೈಲಿಗೆ ಕಳುಹಿಸುವುದು ಇಂದಿನ ತುರ್ತು ಕೆಲಸವಾಗಿದೆ. ಇಲ್ಲದೇ ಇದ್ದಲ್ಲಿ ಜನರಿಂದ ಚುನಾಯಿಸಲ್ಪಟ್ಟ ಸರಕಾರಗಳನ್ನು ಬ್ಲಾಕ್‌ಮೇಲ್ ಮಾಡಿ ಮತ್ತಷ್ಟು ಆಸ್ತಿವಂತರಾಗಿ, ರಾಜಕೀಯ ಪಕ್ಷ ಸ್ಥಾಪಿಸಿ ಜನರಿಗೆ ಮಂಕುಬೂದಿ ಎರಚುತ್ತಾರೆ. ಕೇಂದ್ರ ಸರಕಾರ ಬಾಬಾ ರಾಮ್‌ದೇವ್‌ರಂತಹ ಅವಿವೇಕಿಗಳಿಗೆ ಸಂಪೂರ್ಣ ಶರಣಾಗುವುದರ ಮೂಲಕ ಭಾರತದ ಸಂವಿಧಾನಕ್ಕೆ ಅಪಚಾರ ಮಾಡಿದೆ.











Click it and Unblock the Notifications