ಮೈಸೂರು ಝೂಗೆ ಮದ್ರಾಸಿನ ಮೂರು ಮೊಸಳೆ

Crocodiles in Mysore Zoo
ಮೈಸೂರು, ಜೂ. 8 : ಮಂಗಳವಾರ ಬೆಳಗಿನ ಜಾವ ಆನೆಗಳು ಊರಿಗೆ ನುಗ್ಗಿ ರೌಡಿಯಿಸಂ ನಡೆಸುತ್ತಿರುವ ಸುದ್ದಿ ಗದ್ದಲದ ನಡುವೆಯೇ ಮೈಸೂರಿನಲ್ಲಿ ಮೊಸಳೆಗಳೂ ಸುದ್ದಿ ಮಾಡುತ್ತಿವೆ.

ಪುಣ್ಯಕ್ಕೆ ಇವು ಆನೆಗಳಂತೆ ಸಯ್ಯಾಜಿರಾವ್ ರಸ್ತೆ, ಮಹಾರಾಣಿ ಕಾಲೇಜು, ಬೊಂಬೂ ಬಜಾರಿನ ತನಕ ತೆವಳಿಕೊಂಡು ಬಾರದೆ ಪ್ರಾಣಿ ಸಂಗ್ರಹಾಲಯದಲ್ಲೇ ಇರುವುದು ಸಂತಸದ ಸುದ್ದಿಯಾಗಿದೆ.

ವಿಷಯವೆಂದರೆ, ದಿ ಮದ್ರಾಸ್ ಕ್ರೊಕೊಡೈಲ್ ಟ್ರಸ್ಟ್ ಮೈಸೂರಿನ ಶ್ರೀ ಚಾಮರಾಜೇಂದ್ರ ಪ್ರಾಣಿ ಸಂಗ್ರಹಾಲಯಕ್ಕೆ ವಿಶೇಷ ತಳಿಯ ಮೂರು ಮೊಸಳೆಗಳನ್ನು ಉಡುಗೊರೆಯಾಗಿ ಕೊಟ್ಟಿದೆ.

ಇದರೊಂದಿಗೆ ಮೈಸೂರು ಝೂನಲ್ಲಿರುವ ಮೊಸಳೆಗಳ ಸಂಖ್ಯೆ ಎಂಟಕ್ಕೇರಿದೆ. ಮೊಸಳೆಗಳ ಸ್ವಾಭಾವಿಕ ಜೀವನ ಪರಿಸರವನ್ನು ಹೋಲುವ ವಾತಾವರಣನ್ನು ಸೃಷ್ಟಿಸಲಾಗಿದೆ ಎಂದು ಝೂನ ಅಧಿಕಾರಿಗಳು ಹೇಳುತ್ತಾರೆ.

ಉಪ್ಪುನೀರಿನಲ್ಲಿ ಕಂಡುಬರುವ (Salt Water Crocodile) ಅತ್ಯಂತ ದೊಡ್ಡ ಮೊಸಳೆ ಹಾಗೂ ವಿಶ್ವದ ಅತ್ಯಂತ ಚಿಕ್ಕ ಗಾತ್ರದ ಮೊಸಳೆಗಳು (Dwarf Caiman) ಒಂದೇ ಪ್ರಾಣಿಸಂಗ್ರಹಾಲಯದಲ್ಲಿ ಕಾಣಬಹುದಾದ ಹೆಗ್ಗಳಿಗೆ ಮೈಸೂರಿನದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+