ಸಿಎಂ ಸೇರಿ ಸಚಿವ, ಶಾಸಕರ ವೇತನ ಏರಿಕೆ

Karnataka MLAs, Ministers Pay hiked, wallets get hefty
ಬೆಂಗಳೂರು ಜೂ 7 : ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಶಾಸಕರ ಸಂಬಳ ಹಾಗೂ ಭತ್ಯೆ ಮತ್ತು ನಿವೃತ್ತಿ ವೇತನಗಳನ್ನು ಹೆಚ್ಚಳ ಮಾಡಲಾಗಿದೆ. ಕರ್ನಾಟಕ ಸಚಿವರು, ಶಾಸಕರುಗಳ ಸಂಬಳ ಮತ್ತು ಭತ್ಯೆ ವಿಧೇಯಕ(ತಿದ್ದುಪಡಿ) 2011ಕ್ಕೆ ಯಾವುದೇ ಚರ್ಚೆ, ಪ್ರತಿರೋಧವಿಲ್ಲದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿ ಒಪ್ಪಿಗೆ ನೀಡಲಾಯಿತು.

ಈ ತಿದ್ದುಪಡಿ ವಿಧೇಯಕದ ಅನ್ವಯ ಮುಖ್ಯಮಂತ್ರಿಗಳ ಸಂಬಳ ಈಗಿನ 12,000 ರು ಗಳಿಗೆ ಬದಲಾಗಿ 30,000 ರು ಹಾಗೂ ಸಚಿವರುಗಳ ಸಂಬಳ 10,000 ರು ಗಳಿಂದ 25,000 ರು ಗೆ ಹೆಚ್ಚಳವಾಗಿದೆ. ಇದರ ಜೊತೆಗೆ ಇತರೆ ಭತ್ಯೆಗಳನ್ನು ಹೆಚ್ಚಳ ಮಾಡಲಾಗಿದೆ. ಶೇ 150ರಷ್ಟು ಹೆಚ್ಚಳ ಪಡೆದಿರುವ ಸಿಎಂ ಸಹಜವಾಗಿ ಖುಷಿಯಾಗಿದ್ದಾರೆ.

ಮುಖ್ಯಮಂತ್ರಿಗಳ ವಾರ್ಷಿಕ ಆತಿಥ್ಯ ಭತ್ಯೆ 75,000 ರು ಗಳಿಂದ 1.50 ಲಕ್ಷ ರು ಗಳಿಗೆ ಏರಿಕೆಯಾಗಿದೆ. ಪ್ರತಿಪಕ್ಷ ನಾಯಕ ಸಿದ್ದಾರಾಮಯ್ಯ ಹಾಗೂ ಮೋಟಮ್ಮ ಅವರ ತಿಂಗಳ ಸಂಬಳ 20,000 ರುಗೆ ಏರಿಕೆಯಾಗಿದೆ. ಈ ತಿದ್ದುಪಡಿ ವಿಧೇಯಕದಂತೆ ಸಚಿವರುಗಳ ಮನೆ ಬಾಡಿಗೆ ಭತ್ಯೆಯನ್ನು 20 ಸಾವಿರದಿಂದ 40 ಸಾವಿರ ರುಗಳಿಗೆ ಏರಿಸಲಾಗಿದೆ. ಮನೆ ನಿರ್ವಹಣೆ ಭತ್ಯೆಯನ್ನು 5,000 ರು ಗಳಿಂದ 10,000 ರುಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚಿನ ಇಂಧನ ನೀಡಿಕೆ : ಸಚಿವರುಗಳಿಗೆ ತಿಂಗಳಿಗೆ 500 ಲೀ ಪೆಟ್ರೋಲ್ ನ ಬದಲಾಗಿ 750 ಲೀಟರ್ ನೀಡಲಾಗುತ್ತದೆ. ವಾಹನ ಭತ್ಯೆಯನ್ನು 16,000 ರು ಗಳಿಗೆ ಹೆಚ್ಚಿಸಲಾಗಿದೆ. ಸಚಿವರುಗಳ ವಾರ್ಷಿಕ ಆತಿಥ್ಯ ಭತ್ಯೆ 50,000 ರು ಗಳಿಂದ 80,000 ರು ಗಳಿಗೆ ಏರಿಸಲಾಗಿದೆ. ಪ್ರಯಾಣ ಭತ್ಯೆ: 12,000 ರುಗಳಿಂದ 20,000 ರು ಗಳಿಗೆ ಏರಿಕೆ ಪ್ರವಾಸದಲ್ಲಿ ದಿನಭತ್ಯೆ : 1,200 ರು ಗಳಿಂದ 2,000 ರು ಗಳಿಗೆ ಏರಿಕೆ

ಶಾಸಕರಿಗೂ ಸಂತಸದ ಸುದ್ದಿ: ಶಾಸಕರು ಸಭಾಪತಿ ಹಾಗೂ ಸಭಾಧ್ಯಕ್ಷರುಗಳ ವೇತನ ಹಾಗೂ ಭತ್ಯೆಯೂ ಏರಿಕೆಯಾಗಿದೆ. ಎಂಎಲ್ ಎ, ಎಂಎಲ್ ಸಿ ಗಳಿಗೆ ತಿಂಗಳಿಗೆ 10,000 ರು ಗಳ ಬದಲಿಗೆ 20, 000 ರು ಸಿಗಲಿದೆ. ವಿಧಾನಸಭಾಧ್ಯಕ್ಷ ಹಾಗೂ ಸಭಾಪತಿಗಳ ವೇತನ 12,000 ರು. ಗಳಿಂದ 30, 000 ರು.ಗಳಿಗೆ ಹೆಚ್ಚಿಸಲಾಗಿದೆ. ವಾಹನ ಭತ್ಯೆ ಪ್ರತಿ ಕಿ.ಮೀಗೆ 12 ರೂ ನಿಂದ 20 ರೂ ಗೆ ಏರಿಕೆಯಾಗಿದೆ. ತಿಂಗಳಿಗೆ 500 ಲೀ. ಇಂಧನಕ್ಕೆ ಬದಲಾಗಿ 750 ಲೀ ಇಂಧನ ದೊರೆಯಲಿದೆ.

ಇದಲ್ಲದೆ ಭಾರತದ ಯಾವುದೇ ಭಾಗದಲ್ಲಿ ವಿಮಾನ ಅಥವಾ ರೈಲಿನಲ್ಲಿ ಪ್ರಯಾಣ ಮಾಡುವ ರಾಜಕೀಯ ಮುಖಂಡರಿಗೆ ಪ್ರವಾಸ ಭತ್ಯೆ ಹೆಸರಿನಲ್ಲಿ 2 ಲಕ್ಷ ರು ಗಳನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ. ಶಾಸಕರ ಆಪ್ತ ಸಹಾಯಕ ಸಂಬಳ 5 ಸಾವಿರದೈಂದ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹಾಗೂ ಶಾಸಕರ ದೂರವಾಣಿ ಕರೆ ವೆಚ್ಚ 15 ಸಾವಿರಕ್ಕೆ ಏರಿಕೆಯಾಗಿದೆ. ಒಟ್ಟಾರೆ ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಸಿಗುತ್ತಿರುವ ಸೌಲಭ್ಯದ ಆರ್ಥಿಕ ವೆಚ್ಚ 250 ಲಕ್ಷ ರು ನಷ್ಟಾಗುತ್ತದೆ. ಅದೇ ರೀತಿ ಉಳಿದ ರಾಜಕೀಯ ಮುಖಂಡರ ವಾರ್ಷಿಕ ವೆಚ್ಚ 2347.11 ಲಕ್ಷ ರು ಮೀರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+