ಟೆಕ್ಕಿ ಪತ್ನಿ ಸಾವು, ಪತಿ ಸೆರೆ, ವರದಕ್ಷಿಣೆ ಕಿರುಕುಳ?

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅಸ್ತೀ ಶೇಖರ್ (25) ಅವರ ಪೋಷಕರಾದ ಮುರಳಿಧರ್ ಪಾಠಕ್ ಹಾಗೂ ಸರಿತಾ ಪಾಠಕ್ ಅವರು ನೀಡಿದ ದೂರಿನ ಅನ್ವಯ ಸಿಕಂದರ್ ನನ್ನು ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆ(ಐಪಿಸಿ) 304ಬಿ ಅನ್ವಯ ವರದಕ್ಷಿಣೆ ಕಿರುಕುಳ ನೀಡಿರುವ ಆರೋಪವನ್ನು ಹೊರೆಸಲಾಗಿದೆ. ಅಲ್ಲದೆ ಸಾಕ್ಷಿ, ಆಧಾರಗಳನ್ನು ನಾಶ ಹಾಗೂ ಮೃತಳ ಪೋಷಕರನ್ನು ದಿಕ್ಕುತಪ್ಪಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಐಪಿಸಿ 429(ಎ) ಅನ್ವಯ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಠಾಣಾಧಿಕಾರಿ ರವಿಕಾಂತೇ ಗೌಡ ಹೇಳಿದರು.
ಪಾಟ್ನಾದ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿರುವ ಅಸ್ತಿ ತಂದೆ ಪಾಠಕ್ ಹೇಳುವ ಪ್ರಕಾರ, ಅಸ್ತಿ ಹಾಗೂ ಸಿಕಂದರ್ ಮದುವೆಯಾಗಿ ಮುರ್ನಾಲ್ಕು ತಿಂಗಳಷ್ಟೇ ಕಳೆದಿದೆ. ಸ್ನಾತಕೋತ್ತರ ಪದವಿ ಪಡೆದಿದ್ದ ಅಸ್ತಿ, ಯಾವತ್ತು ಆತ್ಮಹತ್ಯೆಯ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಆರೋಪಿ ಸಿಕಂದರ್ ತಂಡೆ ಮನ್ವಿಂದರ್ ಜಾ ಹಾಗೂ ತಾಯಿ ನಂದಿತಾ ಜಾ ಅವರನ್ನು ಕೂಡಾ ಈ ಕೇಸ್ ನಲ್ಲಿ ವಿಚಾರಣೆಗೆ ಒಳಪಡಿಸಬೇಕು. ವರದಕ್ಷಿಣೆ ಪೀಡಕರನ್ನು ಬಂಧಿಸಬೇಕು ಎಂದಿದ್ದಾರೆ.
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಅಸ್ತಿ, ಕಿರುಕುಳದ ಬಗ್ಗೆ ಸೂಕ್ಷ್ಮವಾಗಿ ತನ್ನ ಡೆತ್ ನೋಟ್ ನಲ್ಲಿ ಹೇಳಿದ್ದಳು. ಪತಿಯ ಕ್ಷಮೆ ಕೋರುತ್ತಿದ್ದೇನೆ. ಉದ್ಯೋಗ ಸಿಗದೆ ನಾನು ಈ ರೀತಿ ಮಾಡುತ್ತಿದ್ದೇನೆ. ನನ್ನ ಪತಿಗೆ ಇನ್ಮುಂದೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದ್ದರು. ಸಿಕಂದರ್ ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದು, ತನಿಕೆ ಮುಂದುವರೆದಿದೆ.












Click it and Unblock the Notifications