ನಾವು ನೀವೆಲ್ಲ ಪರಿಸರ ಸ್ನೇಹಿತರಾಗೋಣ ಬನ್ನಿ

ಜೂನ್ 5 ವಿಶ್ವ ಪರಿಸರ ದಿನ. ಇಂದಿನ ಪರಿಸ್ಥಿತಿಯಲ್ಲಿ ಒಂದು ದಿನ ಮಾತ್ರವಲ್ಲ ಪ್ರತಿದಿನ ಪರಿಸರ ದಿನವನ್ನಾಗಿ ಆಚರಿಸಬೇಕಾಗಿದೆ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಅತ್ಯಂತ ಜಾಗೃತಿಯಿಂದ ಮತ್ತು ಅತ್ಯಂತ ಕ್ರಿಯಾಶೀಲವಾಗಿ ನಾವು ಕಾರ್ಯ ನಿರ್ವಹಿಸಬೇಕಾಗಿದೆ. ನಮ್ಮಲ್ಲಿನ ಕೆಲ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡರೆ ಪರಿಸರ ಸಮಸ್ಯೆ ತಾನೇ ತಾನಾಗಿ ನಿವಾರಣೆಯಾಗುತ್ತದೆ.

ನಮ್ಮಲ್ಲಿನ ಸಮಸ್ಯೆಗಳೇನೆಂದು ನಮಗೂ ತಿಳಿದಿರುತ್ತದೆ. ಆದರೆ, ಅವನ್ನು ಪರಿಹರಿಸಿಕೊಳ್ಳಲು ಎಳ್ಳಷ್ಟೂ ಪ್ರಯತ್ನ ಮಾಡುವುದಿಲ್ಲ. ಇದೇ ದೊಡ್ಡ ಸಮಸ್ಯೆ. ಈ ಮುಂದಿನ ಪ್ರಶ್ನೆಗಳಿಗೆ ಉತ್ತರ ನಕಾರಾತ್ಮಕವಾಗಿದೆ ಎಂದರೆ ಸಮಸ್ಯೆ ನಿಮ್ಮಲ್ಲೇ ಇದೆ ಎಂದರ್ಥ. ಸಣ್ಣಪುಟ್ಟ ಓಡಾಟಕ್ಕೆ ಸೈಕಲ್ ಬಳಸ್ತೀರಾ? ನೀರಿನ ಪುನರ್ ಬಳಕೆಯ ಬಗ್ಗೆ ಯೋಚಿಸಿದ್ದೀರಾ? ಸಿಎಫ್ಎಲ್ ಬಲ್ಬ್ ಬಳಸಿ ವಿದ್ಯುತ್ ಉಳಿಸ್ತೀರಾ? ಮಣ್ಣಿನ ಗಣಪ ಇಡ್ತೀರಾ? ಪ್ಲಾಸ್ಟಿಕ್ ಚೀಲ ತ್ಯಜಿಸಿದ್ದೀರಾ? ವಾಷಿಂಗ್ ಮಷಿನ್ ಬಿಟ್ಟು ಕೈಯಲ್ಲೇ ಬಟ್ಟೆ ಒಗಿತೀರಾ? ಪರಿಸರ ದಿನಾಚರಣೆಯಂದು ಒಂದಾದರೂ ಗಿಡ ನೆಟ್ಟಿದ್ದೀರಾ?

ಈಗ ಹೇಳಿ ನಿಮ್ಮಲ್ಲಿ (ನಮ್ಮಲ್ಲಿ) ಸಮಸ್ಯೆ ಇದೆಯೋ ಇಲ್ಲವೋ ಅಂತ. ಸಮಸ್ಯೆ ಇಲ್ಲ ಅಂತ ಹೇಳುವುದು ಎಲ್ಲಕ್ಕಿಂತ ದೊಡ್ಡ ಸಮಸ್ಯೆ. ನಾನೊಬ್ಬ ಇದನ್ನೆಲ್ಲ ಪಾಲಿಸಿದರೆ ಪರಿಸರ ಉಳಿಕೆಯಾಗಿಬಿಡುತ್ತಾ ಅಂತ ಉಡಾಫೆಯ ಮಾತನ್ನೂ ಆಡುವುದನ್ನು ನಾವು ಕಲಿತುಬಿಟ್ಟಿದ್ದೇವೆ. ಭೂತಾಪಮಾನ ತಗ್ಗಿಸಲು ಜಾಗತಿಕವಾಗಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ, ವೈಯಕ್ತಿಕವಾಗಿ ನಮ್ಮ ಕಾಣಿಕೆಯೇನು? ನಮ್ಮ ಜೀವನಕ್ರಮವನ್ನು ಬದಲಿಸಿಕೊಳ್ಳಲು ನಾವು ಸಿದ್ಧರಿದ್ದೇವಾ? ಜೀವನಶೈಲಿಯನ್ನು ಬದಲಿಸಿಕೊಳ್ಳಲೇಬೇಕು. ಯಾರೂ ಏನೇ ಹೇಳಲಿ, ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬೇಡಿ.

ಪರಿಸರ ಉಳಿವಿಗಾಗಿ ಆಗಬೇಕಾದ್ದೇನು?

* ಮರಗಳನ್ನು ಸಂರಕ್ಷಿಸಿ, ಭೂಸವಕಳಿ ತಡೆಯಿರಿ.
* ಸಾಧ್ಯವಾದಷ್ಟು ನೀರನ್ನು ಮಿತವಾಗಿ ಬಳಸಿ, ಉಳಿಸಿ.
* ಪ್ಲಾಸ್ಟಿಕ್ ಕೈಚೀಲದ ಬಳಕೆ ನಿಯಂತ್ರಿಸಿ, ಬಟ್ಟೆ ಕೈಚೀಲ ಬಳಸಿ.
* ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ.
* ವಿದ್ಯುತ್ ಮಿತವಾಗಿ ಬಳಸಿ, ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ.
* ಪೆಟ್ರೋಲ್, ಡೀಸೆಲ್ ಉಳಿತಾಯಕ್ಕಾಗಿ ಖಾಸಗಿ ವಾಹನ ಬಳಕೆ ಕಡಿಮೆಗೊಳಿಸಿ.
* ವಾಹನ ಪೂಲಿಂಗ್ ಮಾಡಿಕೊಳ್ಳಿ. ಒಬ್ಬೊಬ್ಬರೇ ಹೋಗುವಾಗ ಸಾರ್ವಜನಿಕ ವಾಹನ ಬಳಸಿ.
* ಮರ ಕಡಿಯುವುದನ್ನು ವಿರೋಧಿಸಿ, ಸಸಿಗಳನ್ನು ಅವಕಾಶ ಸಿಕ್ಕಾಗಲೆಲ್ಲ ನೆಡಿ.
* ಮಳೆ ನೀರು ಕೊಯ್ಲನ್ನು ಮನೆಯಲ್ಲಿ ಅಳವಡಿಸಿಕೊಳ್ಳಿ.
* ಸೋಲಾರ್ ಕುಕ್ಕರ್, ವಾಟರ್ ಹೀಟರ್ ಗಳನ್ನು ಬಳಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+