ಭ್ರಷ್ಟರ ಬಗ್ಗೆ ಮಾಹಿತಿ ನೀಡುವವರಿಗೆ ಮಹಾ ಬಹುಮಾನ
ಥಾಣೆ,
ಜೂನ್ 3: ಭ್ರಷ್ಟ ಸರಕಾರಿ ಉದ್ಯೋಗಿಗಳ ಬಗ್ಗೆ ಮಾಹಿತಿ ನೀಡುವವರಿಗೆ ವಿಶೇಷ ಬಹುಮಾನ ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ. ಭ್ರಷ್ಟಚಾರದ ಬಗ್ಗೆ ಮಾಹಿತಿ ನೀಡುವಲ್ಲಿ ಯಾರು ಆಸಕ್ತರಾಗಿದ್ದಾರೆಯೋ ಅವರು ಭ್ರಷ್ಟಾಚಾರ ನಿಗ್ರಹ ದಳದ ಪ್ರಧಾನ ನಿರ್ದೇಶಕರಲ್ಲಿ ಒಪ್ಪಂದ ಮಾಡಿಕೊಳ್ಳಬಹುದಾಗಿದೆ ಎಂದು ಗೃಹ ಇಲಾಖೆ ಸೂಚಿಸಿದೆ id="toptextpromo">ಮಾಹಿತಿ
ನೀಡುವವರನ್ನು ದಾಳವಾಗಿ ಬಳಸಿಕೊಂಡು ಸರಕಾರಿ ಅಧಿಕಾರಿಗಳ ಬಳಿಯಲ್ಲಿ ಜಮಾವಣೆಗೊಂಡಿರುವ ಅಕ್ರಮ ಸಂಪತ್ತು ಮತ್ತು ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತುಹಾಕಲು ನಿರ್ಧರಿಸಬೇಕು ಎನ್ನುವ ಹಿರಿಯ ಬಿಜೆಪಿ ನಾಯಕ ಓಂ ಪ್ರಕಾಶ್ ಶರ್ಮಾ ಅವರ ಮಾತಿಗೆ ಪೂರಕವಾಗಿರುವ ಆರ್ ಟಿಐ ಪ್ರಶ್ನೆಗೆ ಗೃಹ ಇಲಾಖೆ ಉತ್ತರಿಸಿದೆ. id='are-slot-1' class='oiad oi-axt oiadv'> id='top-searched-articles'>25
ಲಕ್ಷ ರು. ವರೆಗಿನ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ರು. ನಗದನ್ನು ಬಹುಮಾನವಾಗಿ ನೀಡಲಾಗುವುದು. 25 ಲಕ್ಷದಿಂದ 50 ಲಕ್ಷ ರು. ವರೆಗಿನ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ರು. ಬಹುಮಾನ, 50 ಲಕ್ಷ ರು. ಗಳಿಂದ 1 ಕೋಟಿ ರು. ವರೆಗೆ ಭ್ರಷ್ಟಾಚಾರವನ್ನು ಪತ್ತೆಮಾಡಿದವರಿಗೆ 50 ಸಾವಿರ ರು. ಮತ್ತು 1 ಕೋಟಿ ರು. ಗಳಿಂದ 5 ಕೋಟಿ ರು.ಗಳ ವರೆಗೆ ಭ್ರಷ್ಟಾಚಾರ ಪತ್ತೆ ಮಾಡಿದವರಿಗೆ 1 ಲಕ್ಷ ರು. ಹಾಗೂ 5 ಕೋ. ರು. ಗಿಂತ ಹೆಚ್ಚು ಅಕ್ರಮ ಸಂಪತ್ತನ್ನು ಹೊಂದಿರುವವರ ಬಗ್ಗೆ ಮಾಹಿತಿ ನೀಡಿದವರಿಗೆ 2 ಲಕ್ಷ ರು. ನಗದನ್ನು ನೀಡಿ ಗೌರವಿಸಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ.











Click it and Unblock the Notifications