ವೆಬ್ ಸೈಟ್ ಪರಿಚಯ, ಅತ್ಯಾಚಾರದಲ್ಲಿ ಕೊನೆ

Website love ends in rape case Delhi
ನವದೆಹಲಿ, ಜೂ 2: ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ಮೂಡಿದ ಪ್ರೀತಿ ಅತ್ಯಾಚಾರದಲ್ಲಿ ಕೊನೆಗೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರತಿ ದಿನ ಲವ್ ಸೆಕ್ಸ್ ದೋಖಾ ಕ್ರೈಂ ಪ್ರಕರಣಗಳ ಯಥೇಚ್ಛವಾಗಿ ಟಿವಿಯಲ್ಲಿ ಪ್ರಸಾರವಾದರೂ ಯುವ ಜನಾಂಗ ಹಿಂದೂ ಮುಂದೂ ನೋಡದೆ ಅಪರಿಚಿತರನ್ನು ನಂಬಿ ಬಾಳು ಹಾಳುಗೆಡವಿಕೊಳ್ಳುವುದು ನಿಂತಿಲ್ಲ. ಆತ ಹಾಗೆ ಮಾಡುತ್ತಾನೆ ಎಂದು ಕನಸಿನಲ್ಲೂ ಎನಿಸಿರಲಿಲ್ಲ ಎನ್ನುತ್ತಾರೆ ಅತ್ಯಾಚರಕ್ಕೆ ಒಳಗಾದ 27 ವರ್ಷದ ಜ್ಯೋತಿ(ಹೆಸರು ಬದಲಿಸಲಾಗಿದೆ). ಜ್ಯೂನಿಯರ್ ವಕೀಲೆಯಾಗಿರುವ ಈಕೆಗೆ ನೋಯ್ಡಾದ ಸಾಫ್ಟ್ ವೇರ್ ಟೆಕ್ಕಿ ಸರಿಯಾದ ವಂಚನೆ ಮಾಡಿ, ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.

ಆರೋಪಿ ವೈಭವ್ ದೀಕ್ಷಿತ್‌ ಹಾಗೂ ಜ್ಯೋತಿ ಪರಿಚಯ ಸುಮಾರು ಆರು ತಿಂಗಳಷ್ಟು ಹಳೆಯದು. ವೈವಾಹಿಕ ವೆಬ್ ತಾಣದಲ್ಲಿ ಸೂಕ್ತ ವರನನ್ನು ಕಾಣುವ ಇಚ್ಛೆಯಿಂದ ಜ್ಯೋತಿ ಒಂದು ಪ್ರೊಫೈಲ್ ತೆರೆದಿದ್ದಾರೆ. ಜ್ಯೋತಿ ಪ್ರೊಫೈಲ್ ನೋಡಿ ಮರುಳಾದ ಸಾಫ್ಟ್ ವೇರ್ ಇಂಜಿನಿಯರ್ ವೈಭವ್, ಜ್ಯೋತಿ ಸ್ನೇಹ ಬಯಸಿದ.

ವೈಭವ್ ವೃತ್ತಿ ಜೀವನ ಇತರೆ ವಿವರಗಳತ್ತ ಒಮ್ಮೆ ಕಣ್ಣಾಡಿಸಿದ ಜ್ಯೋತಿ, ಆತನಲ್ಲಿ ತನ್ನ ಭಾವಿ ಪತಿಯನ್ನು ಕಲ್ಪಿಸಿಕೊಂಡು ಗೆಳೆತನಕ್ಕೆ ಒಪ್ಪಿಗೆ ನೀಡಿದಳು. ಹೀಗೆ ಸುಮಾರು ಐದಾರು ತಿಂಗಳುಗಳ ಕಾಲ ಇಬ್ಬರಲ್ಲೂ ನಂಬಿಕೆ ಉಂಟಾದ ಮೇಲೆ ಪರಸ್ಪರ ಭೇಟಿಯಾಗಲು ನಿರ್ಧರಿಸಿದ್ದಾರೆ.

ನಂತರ ವೈಭವ್ ನನ್ನು ದಕ್ಷಿಣ ದೆಹಲಿಯಲ್ಲಿ ಹಲವು ಬಾರಿ ಭೇಟಿ ಮಾಡಿದೆ. ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ. ಅವನನ್ನು ನಾನು ಸಂಪೂರ್ಣವಾಗಿ ನಂಬಿಬಿಟ್ಟೆ. ಒಂದು ದಿನ ನೋಯ್ಡಾಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿಬಿಟ್ಟ. ನಂತರ ನನ್ನನು ಭೇಟಿ ಮಾಡಲಿಲ್ಲ, ನನ್ನ ಫೋನ್ ಕರೆಯನ್ನು ಸ್ವೀಕರಿಸಲಿಲ್ಲ. ಪೂರ್ಣವಾಗಿ ನನ್ನನ್ನು ನಿರ್ಲಕ್ಷಿಸತೊಡಗಿದ. ಕೊನೆಗೆ ಪೊಲೀಸರ ಮೊರೆ ಹೋಗಬೇಕಾಯಿತು ಎಂದು ಜ್ಯೊತಿ ತನ್ನ ಕಥೆ ಹೇಳುತ್ತಾಳೆ. ಪೊಲೀಸರಿಗೆ ಸಿಗದೆ ತಿಂಗಳುಗಳ ಕಾಲ ತಪ್ಪಿಸಿಕೊಂಡಿದ್ದ ವೈಭವ್ ನನ್ನು ಕೊನೆಗೂ ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+