ಎಕ್ಸಪ್ರೆಸ್ ಪತ್ರಿಕೆ ವಿರುದ್ಧ ಮಾರನ್ ಕೇಸ್

ಚೆನ್ನೈ, ಜೂನ್ 2: ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವಿರುದ್ಧ 10 ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಎಕ್ಸ್ ಪ್ರೆಸ್ ಬಳಗದ ದಿನಮಣಿ ಪತ್ರಿಕೆಯು "ಮಾರನ್ 323 ದೂರವಾಣಿ ಸಂಪರ್ಕಗಳನ್ನು ಹೊಂದಿದ್ದಾರೆ" ಎಂದು ಗುರುವಾರ (ಜೂನ್ 2) ವರದಿಯೊಂದನ್ನು ಪ್ರಕಟಿಸಿತ್ತು. ವರದಿಯ ವಿವರಗಳು ಹೀಗಿವೆ:

* ಮಾಜಿ ಸಚಿವ, ಡಿಎಂಕೆ ನೆಂಟ ದಯಾನಿಧಿ ಮಾರನ್ ಬಳಿ 323 ದೂರವಾಣಿ ಸಂಪರ್ಕಗಳು ಇವೆ. ಗಮನಿಸಿ, 2ಜಿ ಹಗರಣದ ಕರ್ತೃ ಎ.ರಾಜಾ ಸಹ ಇಷ್ಟೊಂದು ದೂರವಾಣಿಗಳನ್ನು ಹೊಂದಿರಲಿಲ್ಲ.

* ಆದರೆ ಈತ ಈ ಬಿಎಸ್ಎನ್ಎಲ್ ಸಂಪರ್ಕಗಳನ್ನು ಹೊಂದಿರುವುದು ದೆಹಲಿಯಲ್ಲಲ್ಲ; ಚೆನ್ನೈನಲ್ಲಿ. ತವರಿನ ಪ್ರೇಮ ಅಂದರೆ ಇದೇನಾ! ಗಮನಾರ್ಹವೆಂದರೆ ಶಾಣ್ಯಾ ಮಾರನ್, ಈ ಕನೆಕ್ಷನ್ ಗಳನ್ನೆಲ್ಲ ಚೆನ್ನೈ ಬಿಎಸ್ಎನ್ಎಲ್ ನ ಮಹಾ ಪ್ರಧಾನ ವ್ಯವಸ್ಥಾಪಕನ ಹೆಸರಲ್ಲಿ ಹೊಂದಿರುವುದು. ಸಚಿವರ ಮನೆಯೇ ಮಿನಿ ಟೆಲಿಫೋನ್ ಎಕ್ಸ್ ಚೇಂಜ್ ಆಗಿತ್ತು.

* ಇದರಿಂದ ಇಲಾಖೆ ಕೋಟ್ಯಂತರ ರುಪಾಯಿ ನಷ್ಟ ಅನುಭವಿಸಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಅಲ್ಲವೇ? ಎಷ್ಟು ಹಣ ನಷ್ಟ ವಾಗಿದೆ ಎಂದರೆ ಒಂದೇ ಒಂದು ದೂರವಾಣಿ ಸಂಪರ್ಕದಿಂದ (ಸಂಖ್ಯೆ 24371515) ಒಂದೇ ಒಂದು ತಿಂಗಳ ಬಿಲ್ 48 ಲಕ್ಷ ರುಪಾಯಿ ಆಗಿತ್ತು. ಉಳಿದ 322 ಸಂಪರ್ಕಗಳ ಬಿಲ್ 2007ರ ಜನವರಿಯಿಂದ ಏಪ್ರಿಲ್ ವರೆಗೆ ಕೇವಲ 440 ಕೋಟಿ ರುಪಾಯಿ ಬಿಲ್ ಆಗಿತ್ತು. ಇದು ಮಹಾ ದರೋಡೆಯಲ್ಲದೆ ಮತ್ತಿನ್ನೇನು?

* ಇಷ್ಟಕ್ಕೂ ಮಾರನ್ ಇಷ್ಟೊಂದು ಸಂಪರ್ಕಗಳನ್ನು ಹೊಂದಿದ್ದ ಎಂದರೆ ಇವೆಲ್ಲ ಆರ್ಡಿನರಿ ಲೈನ್ ಗಳಲ್ಲ. ಬಹುಸಾಮರ್ಥ್ಯದ ಸಂಪರ್ಕಗಳು. ಇವೆಲ್ಲ ನೇರವಾಗಿ ಸನ್ ಟಿವಿ ಕೇಂದ್ರಕ್ಕೆ ಸಂಪರ್ಕ ಹೊಂದಿದ್ದವು. ಮಹಾಜನತೆ ಅಲ್ಲಿಂದ ಬಿತ್ತರವಾಗುತ್ತಿದ್ದ ಟಿವಿ ಕಾರ್ಯಕ್ರಮಗಳನ್ನು ಅಮಾಯಕವಾಗಿ ನೋಡುತ್ತಿದ್ದರು. 2007ರಲ್ಲಿಯೇ ಸಿಬಿಐ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಪತ್ರ ಬರೆದಿತ್ತು. ಆದರೆ ಕೇಂದ್ರ ಸರಕಾರ ರಿಂಗಣಿಸಲಿಲ್ಲ. [ವಿಡಿಯೋ : ತೆಹೆಲ್ಕಾ ವಿರುದ್ಧವೂ ಕೇಸು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+