ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಅಂತರ್ಜಾಲ ಸ್ಪರ್ಧೆ

ಪರಿಸರ ಸಂಬಂಧಿ ಚಟುವಟಿಕೆಗಳನ್ನು ಉತ್ತೇಜಿಸುವುದಕ್ಕಾಗಿ ಕಾನ್ಸುಲೇಟ್‌ನ ದಿ ಅರ್ಥ್ ಡೇ ನೆಟ್‌ವರ್ಕ್' ವೆಬ್‌ಸೈಟ್ ತಾಣದಲ್ಲಿ ಹಸಿರಿನ ಶತಕೋಟಿ ಕಾರ್ಯಗಳು' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡುವಂತಹ ಸರಳ ವೈಯಕ್ತಿಕ ಚಟುವಟಿಕೆಗಳು ಮತ್ತು ಬೃಹತ್ ಸಂಘಟನಾತ್ಮಕ ಪ್ರಯತ್ನಗಳಿಗೆ ಈ ಸ್ಪರ್ಧೆಯು ಪ್ರೇರೇಪಿಸಲಿದೆ ಎಂಬ ಆಶಯವನ್ನು ಕಾನ್ಸುಲೇಟ್ ವ್ಯಕ್ತಪಡಿಸಿದೆ.
2012ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಭೂ ಸಮ್ಮೇಳನದ ಹೊತ್ತಿಗೆ ಕನಿಷ್ಠ ಒಂದು ಶತಕೋಟಿ ಪರಿಸರ ಸ್ನೇಹಿ ಚಟುವಟಿಕೆಗಳನ್ನು ನೋಂದಣಿ ಮಾಡಿಕೊಳ್ಳುವುದು ಇದರ ಗುರಿ. ಇದಕ್ಕಾಗಿ ಅಮೆರಿಕ ಕಾನ್ಸುಲೇಟ್ ಬ್ಲಾಗ್ ಸ್ಪರ್ಧೆ, ವಿಡಿಯೊ ಸ್ಪರ್ಧೆ, ವೆಬ್/ವಿಡಿಯೊ ಚಾಟ್‌ಗಳು, ಡಿವಿಸಿಗಳು ಮತ್ತು ಶಾಲಾ ಮಕ್ಕಳಿಗೆ ವಸ್ತುಗಳ ಮರುಬಳಕೆ ಕುರಿತ ಕಾರ್ಯಕ್ರಮ ಸೇರಿದಂತೆ ಹಲವಾರು ಸರಣಿ ಕಾರ್ಯಕ್ರಮಗಳನ್ನು ನಡೆಸಲಿದೆ.
ಪರಿಸರ ರಕ್ಷಣೆ ಕಾರ್ಯದಲ್ಲಿ ಜನರನ್ನು ಪರಿಣಾಮಕಾರಿಯಾಗಿ ತೊಡಗಿಸಬಲ್ಲ ಅಂತರ್ಜಾಲದ ಸಾಮರ್ಥ್ಯವನ್ನು ಅಳೆಯಲು ಈ ಸ್ಪರ್ಧೆಯ ಮೂಲಕ ತಿಳಿದುಕೊಳ್ಳಬಹುದಲ್ಲದೆ, ಪರಿಸರ ಕಾಳಜಿಯಲ್ಲಿನ ತಮ್ಮ ಪಾತ್ರವನ್ನು ಅರಿತುಕೊಳ್ಳಲು ಜನರಲ್ಲಿ ಉತ್ತೇಜನ ಮೂಡಿಸಲು ಈ ಮೂಲಕ ಪ್ರಯತ್ನಿಸಲಾಗುವುದು' ಎಂದು ಅಮೆರಿಕ ಕಾನ್ಸುಲ್ ಜನರಲ್ ಆಂಡ್ರ್ಯೂ ಸಿಮ್ಕಿನ್ ತಿಳಿಸಿದ್ದಾರೆ











Click it and Unblock the Notifications