ಅಥಣಿ ಶೋರೂಮ್ ಗೆ ಬೆಂಕಿ, 6 ಮಂದಿ ದಹನ
ಬೆಳಗಾವಿ,
ಜೂ 1: ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದ್ದು, 6 ಮಂದಿ ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಅಥಣಿಯ ಬುಡರ್ ಗಲ್ಲಿಯಲ್ಲಿರುವ ಸ್ವಾಮಿ ಕಲೆಕ್ಷನ್ ಬಟ್ಟೆ ಶೋ ರೂಮ್ ಇರುವ ಕಟ್ಟಡ ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಕ್ಕಿಕೊಂಡಿದೆ. ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಬೆಳಗ್ಗಿನಿಂದ ಹರಸಾಹಸ ಪಡುತ್ತಿದ್ದಾರೆ. id="toptextpromo">ಅಥಣಿ
ಪಟ್ಟಣದ ದೊಡ್ಡ ಟೆಕ್ಸ್ ಟೈಲ್ ಶೋರೂಮ್ ಆಗಿರುವ ಸ್ವಾಮಿ ಕಲೆಕ್ಷನ್ ಐದು ಅಂತಸ್ತಿನ ಕಟ್ಟಡ ಹೊಂದಿದೆ. ನಾಲ್ಕು ಅಂತಸ್ತು ಬಟ್ಟೆ ವ್ಯಾಪಾರಕ್ಕೆ ಮೀಸಲಾಗಿದ್ದು, ಐದನೆ ಅಂತಸ್ತಿನಲ್ಲಿ ಟೆಕ್ಸ್ ಟೈಲ್ಸ್ ಮಾಲೀಕರ ಕುಟುಂಬ ವಾಸವಾಗಿತ್ತು. ಬೆಂಕಿಯ ಆಕ್ರೋಶಕ್ಕೆ ಆರು ಮಂದಿಯಿದ್ದ ಕುಟುಂಬ ದಹನವಾಗಿದ್ದಾರೆ. ಈ ದುರ್ಘಟನೆಯ ವಿವರ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷಣ ಸವದಿ ಅವರು ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಿಲಿಂಡರ್
ಸ್ಫೋಟದಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಹೊತ್ತಿ ಉರಿಯುತ್ತಿರುವ ಕಟ್ಟಡದ ಸುತ್ತಾಮುತ್ತಾ ಸಕ್ಕರೆ ಕಾರ್ಖಾನೆಗಳು, ವಸತಿ ಸಮುಚ್ಚಯಗಳು ಹಾಗೂ ಅನೇಕ ಕೈಗಾರಿಕಾ ಕಟ್ಟಡಗಳಿದ್ದು ಯಾವುದಕ್ಕೂ ಹಾನಿಯಾಗಿಲ್ಲ. ಸುಮಾರು 6 ಅಗ್ನಿಶಾಮಕ ದಳ ಸತತವಾಗಿ 5 ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯಕ್ಕೆ ನೆಲಮಹಡಿ ಹಾಗೂ ಮೂರನೇ ಅಂತಸ್ತಿನ ಭಾಗದಲ್ಲಿ ಬೆಂಕಿ ಸಂಪೂರ್ಣ ನಂದಿದೆ. ಪರಿಹಾರ ಕಾರ್ಯ ಮುಂದುವರೆದಿದೆ.











Click it and Unblock the Notifications