ಮಹಿಳೆಯಿಂದ 'ಸ್ಫೋಟಕ' ಕರೆ: BIALನಲ್ಲಿ ಹೈ ಅಲರ್ಟ್
ಬೆಂಗಳೂರು,
ಜೂನ್ 1: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಅನಾಮಧೇಯ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ BIALನಲ್ಲಿ ಬುಧವಾರ ಕಟ್ಟೆಚ್ಚರ ವಹಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ತಪಾಸಣೆಗೆ ಒಳಪಡಿಲಾಗುತ್ತಿದೆ. ನಿಲ್ದಾಣದ ಮತ್ತು ಸುತ್ತಮುತ್ತ ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಉತ್ತರ ಡಿಸಿಪಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ. id="toptextpromo">ಘಟನೆ
ಸಂಬಂಧ ಯಾರನ್ನೂ ಬಂಧಿಸಿಲ್ಲ. ಯಾವುದೇ ಅನಾಹುತವೂ ಸಂಭವಿಸಿಲ್ಲ. ನಗರದ ಉನ್ನತ ಪೊಲೀಸ್ ಅಧಿಕಾರಿಗಳು, ಸಿಐಎಸ್ಎಫ್ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ಮಧ್ಯೆ, ಬುಧವಾರ ಬೆಳಗಿನ ಜಾವವೂ ಅನಾಮಧೇಯ ಕರೆಯೊಂದು BIAL ಗೆ ಬಂದಿದೆ ಎನ್ನಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲೂ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದವರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಎರಡು
ದಿನಗಳ ಹಿಂದೆ ಗುಪ್ತಚರ ವಿಭಾಗಕ್ಕೆ ಕರೆ ಮಾಡಿದ ಮಹಿಳೆಯೊಬ್ಬಳು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದಳು. ಅದಕ್ಕೂ ಮುನ್ನ ಇ-ಮೇಲ್ ಮೂಲಕವೂ ಇಂತಹುದೇ ಬೆದರಿಕೆಯೊಡ್ಡಿದ್ದಳು ಎನ್ನಲಾಗಿದೆ. ಮಂಗಳವಾರ ಸಂಜೆ 5.30ರಲ್ಲಿ BIAL ಗೆ ಇ-ಮೇಲ್ ಬಂದಿದೆ.











Click it and Unblock the Notifications