ಎಚ್ಚರ, ತಿಹಾರ್ ಜೈಲಿನಲ್ಲಿ 340 ಏಡ್ಸ್ ಕೈದಿಗಳು!

ಗಮನಿಸಬೇಕಾದ ಅಂಶವೆಂದರೆ, ಬಹುತೇಕ ಕೈದಿಗಳಿಗೆ ತಮಗೆ ಏಡ್ಸ್ ರೋಗವಿದೆಯೆಂದು ತಿಳಿದಿಲ್ಲ. ಜೈಲಿನಲ್ಲಿ ಪ್ರತಿಶತ ಐದರಿಂದ ಆರು ಕೈದಿಗಳು ಈ ಕಾಯಿಲೆಗೆ ತುತ್ತಾಗಿದ್ದು, ಈ ಸಂಖ್ಯೆಯಲ್ಲಿ ಏರುಪೇರಾಗಬಹುದು. ಜೈಲಿನಲ್ಲಿ ಒಟ್ಟು 11,800 ಕೈದಿಗಳಿದ್ದಾರೆಂದು ತಿಹಾರ್ ಜೈಲಿನ ವಕ್ತಾರ ಸುನಿಲ್ ಗುಪ್ತಾ ಹೇಳಿಕೆ ನೀಡಿದ್ದಾರೆ.
5700 ಕೈದಿಗಳು ಕಳೆದ ಮೂರು ವರ್ಷದಲ್ಲಿ ಒಂದು ಬಾರಿಯಾದರೂ ಡ್ರಗ್ಸ್ ಸೇವಿಸಿದ್ದಾರೆ. 2008ರ ನಂತರವಷ್ಟೇ ಜೈಲಿನಲ್ಲಿ ಈ ಕಾಯಿಲೆ ಬಗ್ಗೆ ತಿಳಿದುಕೊಳ್ಳುವ ಸೌಲಭ್ಯ ಲಭ್ಯವಾಗಿದ್ದು, ಸರಕಾರ ಮಾಹಿತಿ ನಿರೀಕ್ಷಿಸಿದ ತಕ್ಷಣ ಈ ಅಂಕಿಅಂಶ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ (NACO) ಮುಖಾಂತರ ನೀಡಲಾಗುತ್ತಿದೆ ಎಂದು ಗುಪ್ತಾ ಪತ್ರಿಕೆಗೆ ತಿಳಿಸಿದ್ದಾರೆ.
ಏಡ್ಸ್ ರೋಗಿಗಳಿಗೆ ನೀಡುವ ವೈದ್ಯಕೀಯ ಸೌಲಭ್ಯ ದುಬಾರಿಯಾಗಿದ್ದು, ದೀನ್ ದಯಾಳ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೀನ್ ದಯಾಳ್ ಆಸ್ಪತ್ರೆಯು ಜೈಲಿನ ಆವರಣದಲ್ಲಿ ಹೆಚ್ಚುವರಿ ಕೊಠಡಿ ಆರಂಭಿಸಿದೆ. ಈ ರೋಗಿಗಳಿಗೆ ವಿಸ್ವಸಂಸ್ಥೆ, ಎನ್ ಜಿ ಓ, ಏಮ್ಸ್ ಸಂಸ್ಥೆಗಳು ಕೂಡ ಸಹಾಯಹಸ್ತ ಚಾಚಿದೆ ಎಂದು ಗುಪ್ತಾ ಹೇಳಿಕೆ ನೀಡಿದ್ದಾರೆ. ಅಂದ ಹಾಗೆ ತಿಹಾರ್ ಜೈಲಿನಲ್ಲಿ ಎ ರಾಜಾ, ಸುರೇಶ ಕಲ್ಮಾಡಿ, ಕನ್ನಿಮೋಳಿ ಮುಂತಾದ ಕುಖ್ಯಾತ ಪುಢಾರಿಗಳಿದ್ದಾರೆ.












Click it and Unblock the Notifications