ಡೀಸೆಲ್, ಎಲ್ ಪಿಜಿ ಏರಿಕೆ ಜೂ.9 ಡೆಡ್ ಲೈನ್
ನವದೆಹಲಿ,
ಮೇ 30: ಪೆಟ್ರೋಲ್ ಬೆಲೆ ಏರಿಕೆ ನಂತರ ಡೀಸೆಲ್, ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ಬೆಲೆಯನ್ನು ಏರಿಸುವ ಸುಳಿವು ನೀಡಿದ್ದ ಕೇಂದ್ರ ಸರ್ಕಾರ, ಈ ಬಗ್ಗೆ ಜೂನ್ 9 ರಂದು ನಿರ್ಧಾರ ಕೈಗೊಳ್ಳಲಿದೆ. ಕೇಂದ್ರ ಆರ್ಥಿಕ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ನಡೆಯುವ ಸಚಿವರ ಸಮಿತಿ ಸಭೆಯಲ್ಲಿ ಇಂಧನ ಏರಿಕೆ ಪ್ರಮಾಣವನ್ನು ನಿಗದಿಪಡಿಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ. id="toptextpromo">ಶ್ರೀ
ಸಾಮಾನ್ಯನಿಗೆ ಎಷ್ಟು ಹೊರೆ: ಡೀಸೆಲ್ ಬೆಲೆ ಲೀಟರ್ ಗೆ ರು.4 ರಷ್ಟು ಏರಿಕೆ ಆಗಬಹುದು ಇಲ್ಲದಿದ್ದರೂ 2 ರಿಂದ 3 ರು ಏರಿಕೆಯಾಗುವುದಂತೂ ಖಂಡಿತ. ಅಡುಗೆ ಅನಿಲ ದರದಲ್ಲಿ 25 ರು. ನಿಂದ 50 ರು ಹೆಚ್ಚಳ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 70 ಡಾಲರ್ ಪ್ರತಿ ಬ್ಯಾರಲ್ ನಿಂದ 100 ಡಾಲರ್ ಗೆ ಏರಿಕೆಯಾಗಿರುವುದೇ ಕಾರಣ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಭಾರತ
ತನ್ನ ಇಂಧನ ಅವಶ್ಯಕತೆಯ ಶೇ.80 ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ಗ್ರಾಹಕರಿಂದ ಪೂರ್ಣ ಪ್ರಮಾಣದಲ್ಲಿ ಈ ಹಣವನ್ನು ಪಡೆಯಲಾಗುತ್ತಿಲ್ಲ. ಪ್ರತಿ ಲೀಟರ್ ಇಧನ ಮೇಲೆ 14 ರು. ಗೂ ಹೆಚ್ಚು ತೆರಿಗೆ ಕಟ್ಟಬೇಕಿದೆ ಎಂದು ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಹೇಳುತ್ತಿವೆ. ಒಟ್ಟಿನಲ್ಲಿ, ಯುಪಿಎ ಸರ್ಕಾರ ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆ ಬಿಸಿಯನ್ನು ಮುಟ್ಟಿಸಲಿದೆ.











Click it and Unblock the Notifications