ಪಾಕ್ ನಿಂದ 50 ಉಗ್ರರ ಪಟ್ಟಿ ಭಾರತಕ್ಕೆ ವಾಪಸ್

ಈ ಪಟ್ಟಿಯಲ್ಲಿರುವ ಉಗ್ರರಿಗೆ ಪಾಕ್ ಆಶ್ರಯ ನೀಡಿರುವುದಾಗಿ ತಿಳಿಸಿದ ಭಾರತವು ಸುಮಾರು 50 ಉಗ್ರರ ಪಟ್ಟಿಯನ್ನು 2010ರ ಜೂನ್ ತಿಂಗಳಲ್ಲಿ ಕಳುಹಿಸಿಕೊಟ್ಟಿತ್ತು.
ಆದರೆ ಅದರಲ್ಲಿ ಪಟ್ಟಿ ಮಾಡಲಾದ ಇಬ್ಬರು ಉಗ್ರರಾದ ಅಬ್ದುಲ್ ರಶೀದ್ ಖಾನ್ ಮತ್ತು ವಾಝಲ್ ಕಮರ್ ಖಾನ್ ಭಾರತದ ಜೈಲಿನಲ್ಲಿದ್ದಾರೆ, ಪಾಕಿಸ್ತಾನದಲ್ಲಿ ಇಲ್ಲ ಎಂಬ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು.
ಪಟ್ಟಿಯಲ್ಲಿ ತಿಳಿಸಿರುವ ವ್ಯಕ್ತಿಗಳೆಲ್ಲ ದೇಶದಲ್ಲಿ ಇಲ್ಲವೆಂದು ಮೊದಲು ಖಾತ್ರಿಪಡಿಸಿರೆಂದು ಪಾಕಿಸ್ತಾನದ ಆಂತರಿಕ ವಿಭಾಗದ ಸಚಿವರು ಭಾರತದ ವಿದೇಶಾಂಗ ಕಚೇರಿಗೆ ಪತ್ರ ಬರೆದಿದ್ದಾರೆಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದಕ್ಕೂ ಮುನ್ನ ಗೃಹಮಂತ್ರಿ ಪಿ ಚಿದಂಬರಂ "ಉಗ್ರರ ಪಟ್ಟಿ"ಯಲ್ಲಿ ತಪ್ಪುಗಳಾಗಿರುವುದನ್ನು ಒಪ್ಪಿಕೊಂಡಿದ್ದರು. ಉಗ್ರರ ಪಟ್ಟಿಯಲ್ಲಾಗಿರುವ ಹೊಣೆಯನ್ನು ಹೊತ್ತುಕೊಂಡ ಅವರು ಈ ತಪ್ಪು ಹೇಗೆ ನಡೆಯಿತ್ತೆಂದು ತನಿಖೆ ಮಾಡುವುದಾಗಿ ಹೇಳಿದ್ದರು.












Click it and Unblock the Notifications