ಸಚಿವ ಅಶೋಕ್ ವಿರುದ್ಧ ಭೂ ಕಬಳಿಕೆ ಯತ್ನ ಆರೋಪ

ಸಚಿವರು ಗಂಗಮ್ಮದೇವಿ ಜಾತ್ರಾ ಮಹೋತ್ಸವ ನೆಪದಲ್ಲಿ ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಅವರ ಬೆಂಬಲಿಗರಾದ ಬಿಬಿಎಂಪಿ ಸದಸ್ಯರು ನೆರವಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪದ್ಮನಾಭ ನಗರದ ಶಾಸಕರೂ ಆಗಿರುವ ಸಚಿವ ಅಶೋಕ್ ಅವರಿಗೆ ಭೂ ಕಬಳಿಕೆ ವಿಚಾರ ಗೊತ್ತಿದ್ದರೂ ಮೌನವಾಗಿ ಉಳಿಯುವ ಮೂಲಕ ಈ ಅಕ್ರಮಕ್ಕೆ ಸಹಕರಿಸುತ್ತಿದ್ದಾರೆ. ಅಲ್ಲದೆ, ಇದರಲ್ಲಿ ಅವರಿಗೂ ಪಾಲು ಇರುವ ಸಂಶಯವಿದೆ ಎಂದು ಹೇಳಿದರು.
ಗಂಗಮ್ಮ ದೇವಿ ದೇವಾಲಯವು ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿದೆ. ಈ ಪ್ರದೇಶವನ್ನು ಕಬಳಿಸಲು ದೇವಿ ಜಾತ್ರೆಯನ್ನು ಸಚಿವರು ಹಾಗೂ ಅವರ ಬೆಂಬಲಿಗರು ಆಯೋಜಿಸಿ ಈ ಜಾಗದ ಮೇಲೆ ಹತೋಟಿ ಹೊಂದಲು ಯತ್ನಿಸುತ್ತಿದ್ದಾರೆ. ಸಚಿವರ ನಡವಳಿಕೆ ಕ್ಷೇತ್ರದ ಜನರಲ್ಲಿ ಸಂಶಯ ಹುಟ್ಟಿಸಿದೆ ಎಂದು ಅವರು ದೂರಿದರು.











Click it and Unblock the Notifications