ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿವೇಶನಕ್ಕೆ ಅಸ್ತು; ರಾಜ್ಯಪಾಲರ ವಾಪಸ್ ಗೆ ಆಗ್ರಹ

By Srinath
|
Google Oneindia Kannada News

Yeddyurappa, Bhardwaj
ನವದೆಹಲಿ, ಮೇ 23: ವಿಧಾನಮಂಡಲದ ಅಧಿವೇಶನವನ್ನು ಜೂನ್ 2 ರಿಂದ ನಡೆಸುವುದಕ್ಕೆ ರಾಜ್ಯಪಾಲ ಹಂಸರಾಜ್‌ ಭಾರಧ್ವಾಜ್‌ ಅಂಕಿತ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ರಾಜ್ಯದ ಅಭಿವೃದ್ಧಿಗೆ ಕಂಟಕವಾಗಿರುವ ರಾಜ್ಯಪಾಲ ಭಾರಧ್ವಾಜ್‌ ಅವರನ್ನು ವಾಪಸ್ ಕರೆಸಿಕೊಳ್ಳುವಂತೆಯೂ ಅವರು ಕೇಂದ್ರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಶಿಫಾರಸು ಮಾಡಿ ರಾಜ್ಯಪಾಲರು ಈ ತಿಂಗಳ 16ರಂದು ಕಳುಹಿಸಿದ್ದ ವಿಶೇಷ ವರದಿಯನ್ನು ಕೇಂದ್ರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ತಾವು ಬಿಜೆಪಿ ಪಕ್ಷದ ವರಿಷ್ಠರು, ಗವರ್ನರ್ ಮತ್ತು ಕೇಂದ್ರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಯಡಿಯೂರಪ್ಪ ಅವರು ಇಂದು ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ರಾಜ್ಯಪಾಲರ ಶಿಫಾರಸನ್ನು ಮಾನ್ಯ ಮಾಡದೆ ಜನಾದೇಶ ಸರಕಾರ ಮುಂದುವರಿಕೆಗೆ ಕೇಂದ್ರ ಸರಕಾರ ಅನುವು ಮಾಡಿಕೊಟ್ಟಿರುವುದು ಪ್ರಜಾತಂತ್ರಕ್ಕೆ ಸಂದ ಜಯ ಎಂದು ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಪ್ರತಿಪಕ್ಷಗಳು ರಾಜ್ಯದ ಅಭಿವೃದ್ಧಿಗೆ ಮಾರಕವಾಗುವ ಇಂತಹ ಪಿತೂರಿಗಳಿಂದ ದೂರವುಳಿಯುವಂತಾಗಲಿ ಎಂದು ಅವರು ಆಶಿಸಿದರು.

English summary
As Union Government rejected Karnataka Governor H R Bhardwaj's recommendation for imposing President’s Rule in Karnataka, Bhardwaj gave his assent to convene the Legislature Session from June 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X