ಬೆಂಗಳೂರಿನ ಕಿಡ್ಸ್ ಲ್ಯಾಬ್ ನಲ್ಲಿ ಭವಿಷ್ಯದ ವಿಜ್ಞಾನಿಗಳು

ಬೆಂಗಳೂರು, ಮೇ 23: ಜಾಗತಿಕ ಮಟ್ಟದ ಬಿಎಎಸ್ಎಫ್ ಕಿಡ್ಸ್ ಲ್ಯಾಬ್ ಕಾರ್ಯಕ್ರಮವು ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯದಲ್ಲಿ ಇಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿವಿಧ ಶಾಲೆಗಳ ಸುಮಾರು 150 ಮಕ್ಕಳು ಭಾಗವಹಿಸಿದ್ದಾರೆ.

ಕಿಡ್ಸ್ ಲ್ಯಾಬ್ ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಸಾಯನ ಶಾಸ್ತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಯಿತು. ಸುಮಾರು ಆರು ರಸಾಯನ ಶಾಸ್ತ್ರ ಪ್ರಯೋಗಗಳ ಮೂಲಕ ಮಕ್ಕಳ ಅರಿವು ಹೆಚ್ಚಿಸುವ ಪ್ರಯತ್ನವನ್ನು ಬಿಎಎಸ್ಎಫ್ ಮಾಡಿದೆ.

2011 ವಿಶ್ವ ರಸಾಯನ ಶಾಸ್ತ್ರ ವರ್ಷವಾಗಿದೆ. ಮನಕುಲಕ್ಕೆ ರಸಾಯನ ಶಾಸ್ತ್ರ ನೀಡಿದ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಕಾರ್ಯಕ್ರಮಗಳನ್ನು ಜಾಗತಿಕವಾಗಿ ನಡೆಸಲಾಗುತ್ತಿದೆ.

"ಇಂತಹ ಸರಳ, ಮೋಜಿನಿಂದ ಕೂಡಿರುವ ಪ್ರಯೋಗಗಳು ಮಕ್ಕಳಲ್ಲಿ ರಸಾಯನ ಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಸಲು ನೆರವಾಗಲಿದೆ" ಎಂದು ಬಿಎಎಸ್ಎಫ್ ಅಧ್ಯಕ್ಷ ಪ್ರಸಾದ್ ಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ.

ಬಿಎಎಸ್ಎಫ್ ಕಿಡ್ಸ್ ಲ್ಯಾಬ್ ನಲ್ಲಿ ಮಕ್ಕಳ ಉತ್ಸಾಹ ಕಂಡು ಸಂತಸ ವ್ಯಕ್ತಪಡಿಸಿದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯದ ನಿರ್ದೇಶಕರಾದ ಶಿವಪ್ರಸಾದ್ ಕೇಂಡೆಡ್ " ಈ ಕಾರ್ಯಕ್ರಮವು ಮಕ್ಕಳನ್ನು ಭವಿಷ್ಯದ ವಿಜ್ಞಾನಿಗಳಾಗಲು ಪ್ರೇರೇಪಿಸಲಿದೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+