ಭಾರತದ ಬದುಕು ಬವಣೆ: ಬಳ್ಳಾರಿಯಲ್ಲಿ ವ್ಯಂಗ್ಯ-ಚಿತ್ರ

ಜನ ಜಾಗೃತಿಯ ಸಮುದಾಯ ಸಾಂಸ್ಕೃತಿಕ ಜಾಥಾ ಈ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಿದ್ದು, ಜನರನ್ನು ಮಾನಸಿಕವಾಗಿ, ಭಾವನಾತ್ಮಕವಾಗಿ ಸುಲಭವಾಗಿ ತಲುಪುವ ಪ್ರಭಾವಿ ಮಾಧ್ಯಮವಾಗಿ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಚಿತ್ರಪ್ರದರ್ಶನದಲ್ಲಿ ಜನಸಾಮಾನ್ಯರು ಸೇರಿ ಎಲ್ಲಾ ವರ್ಗದವರು ಪಾಲ್ಗೊಳ್ಳುತ್ತಾರೆ ಎಂದು ಜಾಥಾ ಸಂಘಟಕರು ಹೇಳುತ್ತಾರೆ.
ಈ ಸಂಘಟನೆಯ ರಾಜ್ಯಾಧ್ಯಕ್ಷ ಆರ್.ಕೆ. ಹುಡಗಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಜನಸಾಮಾನ್ಯರ ದೈನಂದಿನ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ. ಕೇಂದ್ರ ಸಕರ್ಾರ ತೈಲಬೆಲೆ ಹೆಚ್ಚಿಸಿ ಸಕರ್ಾರದ ವ್ಯಾಪ್ತಿಯಲ್ಲಿ ಈ ವಿಷಯ ಇಲ್ಲ ಎಂದು ನುಣುಚಿಕೊಳ್ಳುತ್ತಿದೆ. ರಾಜ್ಯ ಸರ್ಕಾರದ ಅನಗತ್ಯ ತೆರಿಗೆಗಳು, ಸೆಸ್ ಗಳನ್ನು ವಿಧಿಸಿ ಕೇಂದ್ರ ಸರ್ಕಾರದತ್ತ ಕೈತೋರುತ್ತದೆ. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ರಾಷ್ಟ್ರದಲ್ಲಿ ಜನರು ದಂಗೇಳುವುದು ಖಚಿತ ಎಂದರು.
ಈ ಜಾಥಾಕ್ಕೆ ಉತ್ತಮವಾದ ಜನಸ್ಪಂದನೆ ಲಭಿಸಿದೆ. ಇದು ಸಾಂಸ್ಕೃತಿಕ ಜಾಥಾವಾಗಿದೆ. ಜನರ ಕಷ್ಟ, ಸಂಕಷ್ಟಗಳ ನೈಜ ಚಿತ್ರಣವನ್ನು ಮೂಡಿಸುವ ಪ್ರಯತ್ನ ಇದಾಗಿದೆ. ರೈತರ ಆತ್ಮಹತ್ಯೆ - ಕೃಷಿಯಲ್ಲಿನ ಸಮಸ್ಯೆಗಳು - ಸವಾಲುಗಳು, ವಿದೇಶೀ ಬಂಡವಾಳ ಹೂಡಿಕೆಯ ದುಷ್ಪರಿಣಾಮಗಳ ಕುರಿತು ಕಳೆದ ವರ್ಷ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗಿತ್ತು. ಈ ವರ್ಷ ಕೇಂಧ್ರ ಮತ್ತು ರಾಜ್ಯ ಸಕರ್ಾರಗಳ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬೆಲೆ ಏರಿಕೆಯನ್ನು ವಿಷಯವನ್ನಾಗಿ ಪರಿಗಣಿಸಿ ವ್ಯಂಗ್ಯಚಿತ್ರ ಜಾಥಾ ನಡೆಸಲಾಗುತ್ತಿದೆ ಎಂದರು.
ಈ ಜಾಥಾದಲ್ಲಿ ವ್ಯಂಗ್ಯ ಚಿತ್ರ ವೀಕ್ಷಣೆಗೆ ಆಗಮಿಸಿದ ದಾರಿಹೋಕರಲ್ಲಿ ಹೌದೌದು, ಪಾಪ ನೋಡು ಕಷ್ಟಕ್ಕೆ ಸಾವಿಗೇ ಶರಣಾಗಲು ಯತ್ನಿಸುತ್ತಿದ್ದಾನೆ. ಬಡತನ, ಅನಕ್ಷರತೆ, ಮಧ್ಯಮ ವರ್ಗದ ಪರದಾಟ' ಎನ್ನುವ ಚರ್ಚೆ ವ್ಯಾಪಕವಾಗಿ ನಡೆದಿತ್ತು. ಅನೇಕರು ಈ ಚಿತ್ರಗಳಿಂದ ಸಾಕಷ್ಟು ಪ್ರಭಾವಕ್ಕೊಳಗಾಗಿದ್ದರು. ಚಿತ್ರಗಳು ಕೂಡ ಪ್ರಭಾವಿಯಾಗಿದ್ದವು.
ಈ ಜಾಥಾವನ್ನು ವೀಕ್ಷಿಸಿ ಮಾತನಾಡಿದ ಡಿಗ್ರಿ ವಿದ್ಯಾರ್ಥಿಗಳಾದ ಅಹ್ಮದ್, ಸೋಮಶೇಖರ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ವಿದೇಶಗಳಲ್ಲಿಯ ಕಪ್ಪುಹಣ ತರಲು ಕೇಂದ್ರ ಸರ್ಕಾರದ ನೀತಿ ರೂಪಿಸಬೇಕಿದೆ. ಇಲ್ಲವಾದಲ್ಲಿ ದೇಶ ಭ್ರಷ್ಟರ ವಿಶ್ವ ಕಿಂಗ್ಡಂ ಆಗಲಿದೆ. ನಾವೆಲ್ಲರೂ ಭ್ರಷ್ಟಾಚಾರಿಗಳಾಗುತ್ತೇವೆ. ದೇಶ ದಿವಾಳಿಯಾಗಿ ಮತ್ತೊಮ್ಮೆ ದಾಸ್ಯಕ್ಕೊಳಗಾಗುತ್ತದೆ. ಈಗಲೇ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ' ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಂಘಟನೆಯ ಎ. ಕರುಣಾನಿಧಿ, ಕೆ. ಚಂದ್ರಪ್ಪ, ಎಚ್.ಎಂ. ಜಂಬುನಾಥ, ಎಂ. ಉಮಾಮಹೇಶ್ವರ, ಕೆ.ಎಂ. ಸಂತೋಷ ಅವರೆಲ್ಲರೂ ಕೂಡ ವ್ಯಂಗ್ಯ ಚಿತ್ರಗಳನ್ನು ವಿವರಿಸಿ ಜನಸಾಮಾನ್ಯರಿಗೆ ಅರ್ಥೈಸಿದರು. ಇವರ ವಿವರಣೆ ಕೂಡ ತುಂಬಾ ಚೆನ್ನಾಗಿತ್ತು. ವಿಷಯ ನಿರೂಪಣಾ ಶೈಲಿ ಕಥಾನಕವಾಗಿತ್ತು.












Click it and Unblock the Notifications