ಮೈಸೂರು-ಗೋವಾ ನಡುವೆ ಬೇಸಿಗೆ ರೈಲು ಆರಂಭ
ಮೈಸೂರು,
ಮೇ. 18 : ಮೈಸೂರು ಹಾಗೂ ಗೋವಾ(ವಾಸ್ಕೋಡಿಗಾಮ) ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ ಆರಂಭಗೊಂಡಿದೆ. ವಾರಕ್ಕೊಮ್ಮೆ ಸಂಚರಿಸಲಿರುವ ಈ ರೈಲಿಗೆ ಮೈಸೂರಿನ 1ನೇ ಪ್ಲಾಟ್‌ಫಾರಂನಲ್ಲಿ ನೈರುತ್ಯ ರೈಲ್ವೆ ಹಿರಿಯ ಕ್ಯಾಬಿನ್ ಮ್ಯಾನ್ ಪ್ರಸಾದ್‌ಕುಮಾರ್ ಅರಸ್‌ರವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. id="toptextpromo">ಮೊದಲ
ದಿನದ ಪ್ರಯಾಣದಲ್ಲಿ ಮೈಸೂರಿನಿಂದ ಸುಮಾರು 41 ಮಂದಿ ಗೋವಾಕ್ಕೆ ಪ್ರಯಾಣ ಬೆಳೆಸಿದರು. ಎರಡು ಆಸನಗಳ ಎರಡು ಹವಾನಿಯಂತ್ರಿತ, 11 ಸೆಕೆಂಡ್ ಸ್ಲೀಪರ್, ಎರಡು ಮಹಿಳಾ ಮತ್ತು ಮೂರು ಸಾಮಾನ್ಯ, ದ್ವಿತೀಯ ದರ್ಜೆ ಸೇರಿದಂತೆ ಇಪ್ಪತ್ತು ಬೋಗಿಗಳನ್ನು ಹೊಂದಿದೆ. id='are-slot-1' class='oiad oi-axt oiadv'> id='top-searched-articles'>ಮೇ
16ರಿಂದ ಜೂನ್ 6ರವರೆಗೆ ಮೈಸೂರಿನಿಂದ 4 ಟ್ರಿಪ್ ಹಾಗೂ ಮೇ 17ರಿಂದ ಜೂನ್ 7ರವರೆಗೆ ಗೋವಾದಿಂದ 4 ಟ್ರಿಪ್ ಸಂಚರಿಸಲಿದೆ. ಈ ರೈಲು ಮೈಸೂರಿನಿಂದ ಕೆ.ಆರ್.ನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಬಿರೂರು, ದಾವಣಗೆರೆ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾಪುರ, ಲೋಂಡಾ, ಕ್ಯಾಸಲ್‌ರಾಕ್, ಕುಲೇಂ, ಮಡಗಾಂವ್ ಮೂಲಕ ಗೋವಾ ತಲುಪಲಿದೆ. ಹೆಚ್ಚಿನ ಮಾಹಿತಿಗೆ 0821-2420602 ಸಂಪರ್ಕಿಸಬಹುದು.











Click it and Unblock the Notifications