ದೆಹಲಿಯಲ್ಲಿ ರಾಘವೇಂದ್ರಸ್ವಾಮಿಗೆ ಯಡಿಯೂರಪ್ಪ ಮೊರೆ

ಬಳಿಕ ಕೆಲ ಕಾಲ ಏಕಾಂಗಿಯಾಗಿ ಧ್ಯಾನ ಮಾಡಿದರು. ಯಡಿಯೂರಪ್ಪ ಅವರ ಪುತ್ರರೂ ಆಗಿರುವ ಸಂಸದ ರಾಘವೇಂದ್ರ, ಸಚಿವ ಸೋಮಣ್ಣ ಮತ್ತಿತರರು ಅವರ ಜತೆಸೇರಿ ರಾಯರಿಗೆ ಮೊರೆಹೋದರು.
'ಯಾವುದೇ ಸಂಕಷ್ಟ ಬಂದಾಗ ಮಂತ್ರಾಲಯಕ್ಕೆ ಹೋಗಿವೆ. ಈ ಬಾರಿ ದಿಲ್ಲಿಯಲ್ಲಿ ಬೀಡುಬಿಟ್ಟಿರುವುದರಿಂದ ಇಲ್ಲಿಯೇ ಸ್ವಾಮಿಗಳಿಗೆ ಪೂಜೆ ಸಲ್ಲಿಸಿರುವೆ' ಎಂದು ಯಡಿಯೂರಪ್ಪ ತಿಳಿಸಿದರು. ತಮ್ಮ ಸರಕಾರವನ್ನು ಸಂಕಷ್ಟಕ್ಕೆ ತಳ್ಳಿರುವ ಖ್ಯಾತಿ ರಾಜ್ಯಪಾಲ ಭಾರಧ್ವಾಜ್ ಅವರಿಗೆ ಸಲ್ಲುತ್ತದೆ. ಇದೇ ವೇಳೆ ತಮ್ಮ ಪಕ್ಷವನ್ನು ಮತ್ತಷ್ಟು ಒಗ್ಗೂಡಿಸಿದ ಶ್ರೇಯಸ್ಸೂ ರಾಜ್ಯಪಾಲರಿಗೆ ಸಲ್ಲಿಸುತ್ತದೆ. ಆದ್ದರಿಂದ ಅವರನ್ನು ಅಭಿನಂದಿಸುವುದಾಗಿ ಯಡಿಯೂರಪ್ಪ ಈ ಸಂದರ್ಭದಲ್ಲಿ ಹೇಳಿದರು.
ಈ ಹಿಂದೆಯೂ, ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೆ ಏರಿದಾಗ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗುವ ಮೊದಲು ರಾಯರ ಮಠಕ್ಕೆ ಬಂದು ಏಕಾಂತದಲ್ಲಿ ಧ್ಯಾನ ಮಾಡಿದ್ದರು. ಇಂದೂ ಸಹ ಅವರ ಮುಖ್ಯಮಂತ್ರಿ ಗಾದಿ ಅಲ್ಲಾಡುತ್ತಿದೆ. ಕೇಂದ್ರ ಸಂಪುಟ ಇಂದು ಸಭೆ ಸೇರಲಿದೆ. ಯಡಿಯೂರಪ್ಪ ಅವರಿಗೆ ವ್ಯತಿರಿಕ್ತವಾಗಿ ಕಳಿಸಿದ್ದಾರೆನ್ನಲಾದ ವರದಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಕೇಂದ್ರವೇನಾದರೂ ರಾಜ್ಯ ಸರಕಾರವನ್ನು ಅಮಾನತ್ತಿನಲ್ಲಿಡಲು ಅಥವಾ ನೇರವಾಗಿ ರಾಷ್ಟ್ರಪತಿ ಆಳ್ವಿಕೆ ಅಸ್ತು ಎಂದರೆ ತಕ್ಷಣ ರಾಷ್ಟ್ರಪತಿ ಭವನದಲ್ಲಿ ಪಕ್ಷದ ಶಾಸಕರೊಂದಿಗೆ ತೆರಳಿ ಬಲಪ್ರದರ್ಶಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ಹಿನ್ನೆಯಲ್ಲಿ ಗುರುರಾಘವೇಂದ್ರನಿಗೆ ಯಡಿಯೂರಪ್ಪ ಶರಣಾಗಿದ್ದಾರೆ. ಕಳೆದ ಬಾರಿಯಂತೆ ಯಡಿಯೂರಪ್ಪ ಅವರನ್ನು ಆ ರಾಘವೇಂದ್ರ ಸ್ವಾಮಿ ಪಾರು ಮಾಡುವರೇ ಎಂಬುದು ಕುತೂಹಲ ಸಂಗತಿಯಾಗಿದೆ.












Click it and Unblock the Notifications