ಬಾಬಾ ರಾಮದೇವ್ ಕೊಟ್ಟ ಕೇಶರಕ್ಷಕ ಗಂಟಲು ಭಕ್ಷಕವಾಯ್ತು!

ಮುಂಬೈನ ಬಾಯಂದರ್ ನಿವಾಸಿ ಜಾಸ್ಮಿ ಶಂಕರ್ ನರಪುಳ ಎಂಬಾಕೆಗೆ ಹಲವು ವರ್ಷಗಳಿಂದ ಕೂದಲು ಉದರುತ್ತಿತ್ತು. ಟಿವಿಯಲ್ಲಿ ಯೋಗ ಗುರು ರಾಮ್ ದೇವ್ ಅವರ ಕಾರ್ಯಕ್ರಮವೊಂದರಲ್ಲ ಇದಕ್ಕೆ ಪರಿಹಾರವಿರುವುದಾಗಿ ತಿಳಿದಳು. ತನ್ನ ನಿವಾಸದ ಸಮೀಪವಿರುವ ಯೋಗ ಪತಂಜಲಿ ಮಳಿಗೆಯಿಂದ ಆಕೆ ಔಷಧಿ ಖರೀದಿಸಿದಳು. ಅಂಗಡಿಯಾತ ಔಷಧಿಯಾಗಿ ಎರಡು ಬಗೆಯ ಪೌಡರ್ ನೀಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವಂತೆ ತಿಳಿಸಿದ.
ಅದನ್ನು ತಿಂದ ತಕ್ಷಣ ಇವಳಿಗೆ ಗಂಟಲು ಕಟ್ಟಿತು. ಒಂದಕ್ಷರ ಮಾತನಾಡಲು ಸಾಧ್ಯವಾಗಿಲ್ಲ. ದ್ರವಹಾರ ಸೇರಿದಂತೆ ಯಾವುದೇ ಆಹಾರ ಸೇವಿಸಲಾಗಲಿಲ್ಲ. ತಕ್ಷಣ ಈಕೆಯನ್ನು ಪತಿ ಶಂಕರ್ ಆಸ್ಪತ್ರೆಗೆ ದಾಖಲಿಸಿದ. ಎಕ್ಸ್ ರೇಯಲ್ಲಿ ಅನ್ನ ನಾಳ ಬ್ಲಾಕ್ ಆಗಿರೋದು ತಿಳಿಯಿತು. ಕೆಇಎಂ ಆಸ್ಪತ್ರೆಯ ಇಎನ್ ಟಿ ವೈದ್ಯ ಡಾ. ನೀಲಮ್ ಸೇಠ್ 15 ನಿಮಿಷದ ಸಣ್ಣ ಸರ್ಜರಿ ಮೂಲಕ ತೊಂದರೆಯನ್ನು ಸರಿಪಡಿಸಿದರು.
ಈ ಕುರಿತು ಸ್ಥಳೀಯ ಬೋಯಿವಾಡಾ ಪೋಲಿಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಕೆ ಸೇವಿಸಿದ ಪೌಡರನ್ನು ಪ್ರಯೋಗಶಾಲೆಗೆ ಕಳುಹಿಸಿಕೊಡಲಾಗಿದೆ. 'ಇಂತಹ ಘಟನೆ ಕಳೆದ 5 ವರ್ಷದಲ್ಲಿ ನಡೆದಿರುವುದು ಇದೇ ಮೊದಲು" ಎಂದು ಯೋಗ್ ಪತಂಜಲಿ ಮುಂಬೈ ವಕ್ತಾರರು ಹೇಳುತ್ತಾರೆ.












Click it and Unblock the Notifications