ಎಸ್ಸೆಸ್ಸೆಲ್ಸಿ ಫಲಿತಾಂಶ : ಹಳ್ಳಿ ಮಕ್ಕಳೇ ಬೆಟರ್

ಮೊದಲ ಮೂರು ರ‌್ಯಾಂಕ್ ವಿಜೇತರು: ಬಳ್ಳಾರಿ ವಿವೇಕಾನಂದ ಸ್ಕೂಲ್ ನ ವಿಶಾಲ್, ನಳಿನಿ ಹಾಗೂ ಹಾಸನ ಯುನೈಟೆಡ್ ಸ್ಕೂಲ್ ವಿದ್ಯಾರ್ಥಿ ಅನಿಕೇತ್. ಈ ಮೂವರೂ 625ಕ್ಕೆ 620 ಅಂಕ ಗಳಿಸಿದ್ದಾರೆ. [98ರ ಕ್ಲಬ್ ಸೇರಿದ ಎಸ್ಎಸ್ಎಲ್ ಸಿ ಸಾಧಕರು]
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 10ರಷ್ಟು ವಿದ್ಯಾರ್ಥಿಗಳು ಹೆಚ್ಚಿಗೆ ತೇರ್ಗಡೆಯಾಗಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರಕಟಿಸಿದರು. ವಿದ್ಯಾರ್ಥಿಗಳು ಹೆಚ್ಚಿಗೆ ತೇರ್ಗಡೆಯಾಗಿದ್ದರೂ, ನಪಾಸಾದ ವಿದ್ಯಾರ್ಥಿಗಳ ಮೇಲೆ ವಿಶ್ವಾಸ ತುಂಬುವ ಮತ್ತು ಪ್ರಾಣ ಕಳೆದುಕೊಳ್ಳುವ ಕೆಲಸಕ್ಕೆ ಕೈಹಾಕದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರದ್ದು ಎಂದು ಕಿವಿಮಾತು ಹೇಳಿದರು.
ಆನ್ ಲೈನ್ ನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಈಗ ಲಭ್ಯ
ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆ ಎಸ್ಎಸ್ಎಲ್ ಸಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ಮಂಡ್ಯ ಮೂರನೇ ಸ್ಥಾನ ಮತ್ತು ಕಾರವಾರ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕದ ಉತ್ತರ ತುದಿಯಲ್ಲಿರುವ ಬೀದರ್ ದಕ್ಷಿಣ ತುದಿಗೆ ಜಾರಿದೆ. ಬೆಂಗಳೂರು ಗ್ರಾಮಾಂತ ವಿದ್ಯಾರ್ಥಿಗಳು ಶೇ.71.13ರಷ್ಟು ಪಾಸಾಗಿದ್ದರೆ, ನಗರದ ವಿದ್ಯಾರ್ಥಿಗಳು ಶೇ.68.87ರಷ್ಟು ಪಾಸಾಗಿದ್ದಾರೆ. ಮೂರು ವಿದ್ಯಾರ್ಥಿಗಳು 625 ಅಂಕಗಳಲ್ಲಿ 620 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಶೇ.100ರಷ್ಟು ಫಲಿತಾಂಶ : ಕರ್ನಾಟಕದಲ್ಲಿ ಒಟ್ಟು 1468 ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿವೆ. ಈ ಸಾಧನೆ ಮೆರೆದ ಶಾಲೆಗಳ ವಿವರ ಇಂತಿದೆ : 401 ಸರಕಾರಿ ಶಾಲೆಗಳು, 108 ಅನುದಾನಿತ ಮತ್ತು 959 ಅನುದಾನ ರಹಿತ ಶಾಲೆಗಳು. 45 ಶಾಲೆಗಳು ಶೂನ್ಯ ಸಂಪಾದಿಸಿವೆ.
ಪೂರಕ ಪರೀಕ್ಷೆ : ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಪೂರಕ ಪರೀಕ್ಷೆ ಜೂನ್ 15ರಂದು ನಡೆಯಲಿದೆ. ಮರುಮೌಲ್ಯಮಾಪನ ಮಾಡಿಸ ಬಯಸುವವರು ಮೇ 28ರೊಳಗಾಗಿ ಜೆರಾಕ್ಸ್ ಪ್ರತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ದಟ್ಸ್ ಕನ್ನಡ ವೆಬ್ ತಾಣದಲ್ಲಿ ಫಲಿತಾಂಶ ಲಭ್ಯವಾಗಿದೆ. ಫಲಿತಾಂಶ ಮತ್ತು ಅಂಕಗಳ ವಿವರಗಳನ್ನು ತಿಳಿಯಿರಿ. ಆಲ್ ದಿ ಬೆಸ್ಟ್.











Click it and Unblock the Notifications