ಹಾಸನ ಜಿಲ್ಲೆಯಲ್ಲಿ 243 ಯುವತಿಯರು ನಾಪತ್ತೆ

ಇದುವರೆಗೂ 171 ಮಂದಿ ಮರಳಿ ಮನೆ ಬಂದಿದ್ದಾರೆ ಅಥವಾ ಪತ್ತೆಹಚ್ಚಲಾಗಿದೆ. ಬಾಕಿ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಉಳಿದ ಪ್ರಕರಣಗಳು ಬಗೆಹರಿಯುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಈ ಎಲ್ಲಾ ವಿವರಗಳನ್ನು ಹಾಸನ ಪೊಲೀಸರು sphsn.blogspot.com ಎಂಬ ಬ್ಲಾಗ್‌ನಲ್ಲಿ ದಾಖಲಿಸಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಐದು ದಿನಗಳ ಸಮಯದಲ್ಲಿ ಮೂರು ಮಂದಿ ಯುವತಿಯರು ಹಾಸನ ಜಿಲ್ಲೆಯಲ್ಲಿ ಕಾಣೆಯಾಗಿದ್ದರು. ಈ ನಾಪತ್ತೆ ಪ್ರಕರಣಗಳು ಹೊಳೆನರಸಿಪುರ ತಾಲೂಕಿನ ಕ್ಯಾತನಹಳ್ಳಿ ಹಾಗೂ ಬೇಲೂರು ತಾಲೂಕಿನ ಅರೆಹಳ್ಳಿಯಿಂದ ವರದಿಯಾಗಿದ್ದವು. ಬೇಲೂರು ತಾಲೂಕಿನ ಹಳೆಬೀಡು ಸಮೀಪದ ಬಂಡಿಲಕ್ಕನಕೊಪ್ಲು ಗ್ರಾಮದಿಂದ ಏಪ್ರಿಲ್ 24ರಂದು ಮಹಿಳೆಯೊಬ್ಬರು ತನ್ನ ಎರಡು ವರ್ಷದ ಮಗನೊಂದಿಗೆ ಕಾಣೆಯಾಗಿದ್ದರು.
ಯುವತಿಯರು ಇದ್ದಕ್ಕಿಂದ್ದಂತೆ ಯಾಕೆ ಕಾಣೆಯಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಪೊಲೀಸರು ಕಡೆಗೂ ಉತ್ತರ ಹುಡುಕಿದ್ದಾರೆ. ಪೊಲೀಸ್ ಸೂಪರಿಂಟೆಂಡೆಂಟ್ ಅಮಿತ್ ಸಿಂಗ್ ಅವರ ಪ್ರಕಾರ, ಯುವತಿಯರು ಮನೆ ಬಿಟ್ಟು ಓಡಿಹೋಗಲು ಕಾರಣ ಲವ್ ಮ್ಯಾರೇಜ್, ಬಾಯ್ ಫ್ರೆಂಡ್‌ಗಳ ಜೊತೆ ಮದುವೆಯಾಗಲು ಎಂಬ ಅಂಶ ಬಯಲಾಗಿದೆ.ಪ್ರಿಯಕರನೊಂದಿಗೆ ಮದುವೆಗೆ ಮನೆಯವರ ವಿರೋಧದ ಕಾರಣ ಯುವತಿಯರು ಮನೆ ಬಿಟ್ಟು ಹೋಗುತ್ತಿದ್ದಾರೆ ಎಂಬ ಅಂಶ ಬೆಳಕು ಕಂಡಿದೆ.
ಜಿಲ್ಲೆಯಲ್ಲಿ ಯುವತಿಯರ ಅಕ್ರಮ ಸಾಗಾಣಿಕೆ ಜಾಲದ ಇಲ್ಲ ಎಂಬುದನ್ನೂ ಹೇಳಲಾಗದು. ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಯುವತಿಯರು ಅವರಷ್ಟೇ ಓಡಿಹೋಗುತ್ತಿದ್ದಾರೆಯೇ ಅಥವಾ ಅಕ್ರಮ ಸಾಗಾಣಿಕೆ ಜಾಲದ ಕೈವಾಡ ಏನಾದರೂ ಇದೆಯೇ ಎಂಬುದನ್ನು ತನಿಖೆ ಮಾಡಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications