ಮಗಳನ್ನೇ ಸಂಭೋಗಿಸಿದ ಕಾಮಿ ಅಪ್ಪಗೆ ಜೈಲುಶಿಕ್ಷೆ

Father imprisoned for raping daughter
ಬಳ್ಳಾರಿ, ಮೇ. 6 : ಮಗಳನ್ನೇ ಸಂಭೋಗಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ ತಂದೆಗೆ ನ್ಯಾಯಾಲಯ 9 ವರ್ಷ ಜೈಲುವಾಸ ಮತ್ತು 25 ಸಾವಿರ ರುಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಶಿಕ್ಷೆಗೊಳಪಟ್ಟ ಆರೋಪಿ ವಲಿಸಾಬ್ (35). ಈತನು ತನ್ನ 12 ವರ್ಷ ವಯಸ್ಸಿನ ಪುತ್ರಿಯನ್ನು 2 ವರ್ಷಗಳ ಕಾಲ ನಿರಂತರವಾಗಿ ಸಂಭೋಗಿಸಿದ್ದಾನೆ. ಈ ವಿಚಾರ ಬಹಿರಂಗವಾದ ಕೂಡಲೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆಂಡತಿ ಮತ್ತು ಪುತ್ರಿಗೆ ಬ್ಲಾಕ್‌ಮೇಲ್ ಮಾಡಿ ಪೊಲೀಸರ ಮೊರೆ ಹೋಗದಂತೆ ತಡೆಯುವಲ್ಲಿ ಪ್ರಯತ್ನಿಸಿದ್ದ.

ಆದರೆ, ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ 2010ರ ಆಗಸ್ಟ್ 30ರಂದು ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದರು. ಪ್ರಕರಣದ ಕುರಿತು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್ ಅವರು ಪರ - ವಿರೋಧ ವಾದ ಕೇಳಿ ತೀರ್ಪು ಪ್ರಕಟಿಸಿದ್ದಾರೆ.

ಸರ್ಕಾರದ ಪರವಾಗಿ ಎಲ್.ಎಸ್. ಸುಳ್ಳದ್ ಅವರು ವಾದ ಮಂಡಿಸಿದ್ದರು. ಈ ಘಟನೆ ಬಳ್ಳಾರಿಯ ಇಂದಿರಾನಗರದ ಕರಿಮಾರೆಮ್ಮ ಗುಡ್ಡದ ಪಕ್ಕದ ಕರಿಮಾರೆಮ್ಮ ಕಾಲೋನಿಯಲ್ಲಿ ನಡೆದಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+