ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಗೀತೆಯಲ್ಲಿ ದೋಷ: ಪಾಟೀಲ ಪುಟ್ಟಪ್ಪ ತಕರಾರು

By Srinath
|
Google Oneindia Kannada News

ಕಾರವಾರ, ಮೇ 2: ನಾಡಿನ ಹಿರಿಯ ಜೀವ, ನಾಡೋಜ ಪಾಟೀಲ ಪುಟ್ಟಪ್ಪ ಮತ್ತೊಮ್ಮೆ ಖಡಕ್ಕಾದ ಮಾತುಗಳನ್ನು ಆಡಿದ್ದಾರೆ. ಈ ಬಾರಿ ವಿಶ್ವಮಾನವ ಕುವೆಂಪು ವಿರಚಿತ ನಾಡಗೀತೆ ಬಗ್ಗೆ ವಾಸ್ತವದಿಂದ ಕೂಡಿದ ಮಾತುಗಳನ್ನೇ ಹೇಳಿದ್ದಾರೆ. ನಾಡಗೀತೆಯಲ್ಲಿನ ಕೆಲವು ಲೋಪಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಂದರ್ಭ: ಇತ್ತೀಚೆಗೆ ದಾಂಡೇಲಿಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ 16ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಹೇಳಿರುವ ಮಾತುಗಳು.

ನಾಡಗೀತೆಯಲ್ಲಿ ಹಲವು ಲೋಪದೋಷಗಳಿವೆ ಎಂದು ಹೇಳತೊಡಗಿದ ಪಾಪು, ಹಲವು ವ್ಯತ್ಯಯಗಳನ್ನು ಬಿಡಿಸಿಟ್ಟರು. 'ತೈಲಪ ಹೊಯ್ಸಳರಾಳಿದ ನಾಡೆ' ಎಂದು ಹೇಳಲಾಗಿದೆ. ಆದರೆ, ತೈಲಪ ಹೊಯ್ಸಳರು ಸಾಮಾನ್ಯ ದೊರೆಗಳು. ವಿಜಯನಗರದ ದೊರೆ, ರಾಷ್ಟ್ರಕೂಟರು, ಚಾಲುಕ್ಯರಂತಹ ದೊರೆಗಳ ಹೆಸರು ಎಲ್ಲಿದೆ? ನದಿ, ವನಗಳ ನಾಡೆ ಎಂದು ಬರೆದಿದ್ದಾರೆ. ನದಿ, ವನಗಳು ಕೇವಲ ಕರ್ನಾಟಕದಲ್ಲಷ್ಟೇ ಇಲ್ಲ. ಬೇರೆ ರಾಜ್ಯಗಳಲ್ಲೂ ಇವೆ. 'ಜನಕನ ಹೋಲುವ ದೊರೆಗಳ ಧಾಮ' ಎಂದೂ ಪದ್ಯದಲ್ಲಿ ಬಣ್ಣಿಸಲಾಗಿದೆ. ಜನಕನನ್ನು ಹೋಲುವ ದೊರೆಗಳು ಯಾರಿದ್ದಾರೆ.

ಅಷ್ಟಕ್ಕೂ ಕುವೆಂಪು ಈ ಪದ್ಯವನ್ನು ಬರೆಯುವ ವೇಳೆ 24 ವರ್ಷದವರಾಗಿದ್ದರು. ಅವರು ಈ ವಯಸ್ಸಿನಲ್ಲಿ ಬರೆದ ಪದ್ಯದಲ್ಲಿ ಎಲ್ಲೂ ಗಾಂಧೀಜಿ ಹೆಸರಿಲ್ಲ. ಮಹಾತ್ಮ ಗಾಂಧಿಯವರ ಹೆಸರಿಲ್ಲದ ನಾಡಗೀತೆಯನ್ನು ತಾವು ಒಪ್ಪುವುದಿಲ್ಲ. 7 ನಿಮಿಷದ ಈ ಹಾಡನ್ನು ಸಂಗೀತ ನುಡಿಸಿ, ಅನವಶ್ಯಕವಾಗಿ ಎಳೆಯಲಾಗುತ್ತದೆ ಎಂದೂ ನಾಡೋಜ ಪಾಟೀಲ ಪುಟ್ಟಪ್ಪ ಗುಡುಗಿದ್ದಾರೆ. ಸೋಜಿಗವೆಂದರೆ ನಮ್ಮ ನಾಡಗೀತೆ ಆಗಾಗ ವಿವಾದದ ಬಿರುಗಾಳಿಯನ್ನು ಎಬ್ಬಿಸುತ್ತಲೇ ಇದೆ.

English summary
The Naada Geethe of Karnataka is entangled in yet another controversy. Writer-activist, Nadoja Patil Puttappa has questioned the relevance of some points renderd by poet Kuvempu.Papu has strongly objected to not referring to Mahatma Gandhi in The Naada Geethe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X