ಬೆಂಗಳೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ

3-year-old raped in Bangalore
ಬೆಂಗಳೂರು, ಏ. 27 : ಮೂರು ವರ್ಷದ ಕಂದಮ್ಮನನ್ನು ಅಮಾನವೀಯವಾಗಿ ಬಲಾತ್ಕಾರ ಮಾಡಿದ ಆರೋಪದ ಮೇಲೆ ಬಿಹಾರ ಮೂಲದ ದಿನಗೂಲಿ ನೌಕರನನ್ನು ಜೆಪಿ ನಗರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮನೆ ನಿರ್ಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿಹಾರದ ಸುನೀಲ್ ಎಂಬಾತ ತನ್ನ ಕಾಮತೃಷೆಗಾಗಿ ತನ್ನ ಜೊತೆ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮಗಳನ್ನು ಬಳಸಿಕೊಂಡಿದ್ದಾನೆ. ಜೆಪಿನಗರದ 5ನೇ ಹಂತದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಶೆಡ್ ನಲ್ಲಿ ಈ ಹೀನಾಯ ಕೃತ್ಯವನ್ನು ಸುನೀಲ್ ಎಸಗಿದ್ದಾನೆ.

ಮನೆ ನಿರ್ಮಾಣದಲ್ಲಿ ಸುಮಾರು 25 ಕಾರ್ಮಿಕರು ಇಲ್ಲಿ ನಿರತರಾಗಿದ್ದಾರೆ. ಸೋಮವಾರ ರಾತ್ರಿ ಮೂರು ವರ್ಷದ ಅಮಾಯಕ ಬಾಲೆ ಶೆಡ್ ನಲ್ಲಿ ಏಕಾಂಗಿಯಾಗಿರುವುದನ್ನು ಗಮನಿಸಿದ ಸುನೀಲ್ ಚಾಕಲೇಟ್ ಕೊಡುವುದಾಗಿ ಆಸೆ ತೋರಿಸಿದ್ದಾನೆ. ಚಾಕಲೇಟ್ ಗಾಗಿ ಆಸೆಪಟ್ಟ ಹುಡುಗಿ ಆರೋಪಿಯ ಕಾಮಬಲೆಯಲ್ಲಿ ಸಿಲುಕಿಕೊಂಡಿದ್ದಾಳೆ.

ಅತ್ಯಾಚಾರ ಮಾಡಿದ ನಂತರ ಸುನೀಲ್ ತನ್ನ ಕೆಲಸಕ್ಕೆ ಮರಳಿದ್ದಾನೆ. ಕೆಲಸಕ್ಕೆ ಹೋಗಿದ್ದ ತಂದೆ ತಾಯಿಯರಿಬ್ಬರು ಶೆಡ್ಡಿಗೆ ಮರಳಿದಾಗ ಮಗು ಅಳುತ್ತ ಕುಳಿತಿದ್ದುದನ್ನು ನೋಡಿ ಗಾಬರಿಯಾದ ಪಾಲಕರು ಮಗುವನ್ನು ವಿಚಾರಿಸಿದ್ದಾರೆ. ಆಗ ಮಗು ನಡೆದ ಘಟನೆಯನ್ನು ತಂದೆ ತಾಯಿಯರಿಗೆ ತಿಳಿಸಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+