ಸತ್ಯ ಸಾಯಿಬಾಬಾಗೆ ಬ್ರೈನ್ ಡೆಡ್ ಆಗಿತ್ತಾ?

86 ವರ್ಷದ ಬಾಬಾ ಅವರ ಮೂತ್ರಪಿಂಡಗಳು ವಿಫಲವಾಗಿದ್ದವು, ಯಕೃತ್, ಶ್ವಾಸಕೋಶ ಕೆಲಸ ನಿಲ್ಲಿಸಿದ್ದವು. ಉಸಿರಾಟಕ್ಕೂ ತೊಂದರೆ ಉಂಟಾಗಿ, ಕೃತಕ ಉಸಿರಾಟ ವ್ಯವಸ್ಥೆ ಒದಗಿಸಲಾಗಿತ್ತು.ಹೀಗೆ ವಿವಿಧ ಅಂಗಾಂಗ ವೈಫಲ್ಯದ ಕಾರಣ ಮೆದುಳು ನಿಷ್ಕ್ರಿಯಗೊಂಡಿತ್ತು. ಬಾಬಾ ಬ್ರೈನ್ ಡೆಡ್ ಸ್ಥಿತಿ ತಲುಪಿರುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಿಎನ್ ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಭಕ್ತರ ಪ್ರಶ್ನೆಗೆ ಎಲ್ಲಿದೆ ಉತ್ತರ: ಅಸಂಖ್ಯಾತ ಭಕ್ತರ ಮನ ಪರಿವರ್ತನೆ, ಸೇವಾ ಕಾರ್ಯಕ್ಕೆ ಹಚ್ಚಲು ಬಾಬಾರ ಒಂದು ಮಾತು, ಒಂದು ನಗೆ ಸಾಕಿತ್ತು. ಪವಾಡಗಳ ಮೂಲಕ ಜನಾಕರ್ಷಣೆ ಕೇಂದ್ರ ಬಿಂದುವಾಗಿದ್ದ ಬಾಬಾ ಅವರಿಗೆ ಈ ರೀತಿ ಕ್ಷಣ ಕ್ಷಣ ಸಾಯುವ ಸ್ಥಿತಿ ಉಂಟಾಗಿದ್ದಾದರೂ ಏಕೆ? ಇದೆಲ್ಲ ಬಾಬಾರಿಗೆ ಗೊತ್ತಿರಲಿಲ್ಲವೇ? ದೈಹಿಕ ಕಾಯಿಲೆಗಿಂತ ಬಾಬಾರಿಗೆ ಮಾನಸಿಕವಾಗಿ ಯಾವುದಾದರೂ ಬಲವಾದ ಚಿಂತೆ ಕಾಡಿತ್ತೆ?ಉತ್ತರಾಧಿಕಾರಿ ಆಯ್ಕೆ ವಿಷಯ ಬಾಬಾ ಮನದಲ್ಲಿ ಗೊಂದಲ ಮೂಡಿಸಿತ್ತೆ?
ಸುಮಾರು 26 ದಿನಗಳ ಬಾಬಾ ಅನುಭವಿಸಿದ ನರಕಯಾತನೆ ಸಾರ್ವಜನಿಕರಿಗೆ ತಿಳಿಯಬಾರದು ಎಂದು ವಿಡಿಯೋ ಚಿತ್ರಣ ಬಹಿರಂಗಪಡಿಸಲಿಲ್ಲವೇ? ಅಹಾರ ಸೇವನೆ ಇಲ್ಲದೆ ದ್ರವಾಹಾರದಲ್ಲಿ ಕಾಲ ದೂಡುತ್ತಾ ಗುಬ್ಬಚ್ಚಿ ಮರಿಯಂತಾಗಿದ್ದ ಬಾಬಾರ ಆರೋಗ್ಯ ವಿಷಯ ಕೂಡಾ ನಿಗೂಢತೆಯಲ್ಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಸಾಯಿಬಾಬಾ ಪರಂಪರೆಯ ಸತ್ಯಯುಗ ಅಂತ್ಯವಾಗಿದೆ. ಬಾಬಾರ ಜನಸೇವೆಯ ಉಪಯೋಗ ಉಂಡವರು ಅದನ್ನು ಸಮರ್ಥವಾಗಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಹೊರಬೇಕಿದೆ.
;











Click it and Unblock the Notifications