ಗಿರಗಿಟ್ಲೆ ಕಾಮಿ ಬಾಬಾ ಮಸ್ತಾನ್ ಶರಣಾಗತಿ

ವಿಡಿಯೋ: ಟಿವಿ 9 ವಾಹಿನಿಯಿಂದ ನಕಲಿ ಬಾಬಾನ ಕಾಮದಾಟ ಬಯಲು
ಹಣ್ಣು ಮುದುಕ ಗಿರಿಗಿಟ್ಲೆ ಬಾಬಾ ಅಲಿಯಾಸ್ ಬಾಬಾಅಬೂಬಕರ್ ಮಸ್ತಾನ್ ಇಸ್ಲಾಂ ಧರ್ಮಗುರುವಿನಂತೆ ಫೋಸ್ ಕೊಟ್ಟು ಜನರಿಗೆ ಮಂಕುಬೂದಿ ಎರಚುತ್ತಿದ್ದ. ಬಂಟ್ವಾಳದ ವಗ್ಗ ಸಮೀಪದ ಕಾಡಬೆಟ್ಟು ಎಂಬಲ್ಲಿ ತನ್ನ ಮಂತ್ರೋಪಚಾರದ ಜೊತೆಗೆ ಇಲ್ಲಿಗೆ ಬರುವ ಮಹಿಳೆಯರೊಂದಿಗೆ ತನ್ನ ಕಾಮದಾಟವನ್ನು ಸಹ ನಡೆಸುತ್ತಿದ್ದ. ಟಿವಿ 9 ಕನ್ನಡ ವಾಹಿನಿಯಲ್ಲಿ ಈತನ ದುಷ್ಕೃತ್ಯಗಳು ಬಯಲಾದ ಮೇಲೆ ಸ್ಥಳೀಯ ಜನರು ಈತನ ಮನೆಯ ಮೇಲೆ ದಾಳಿ ನಡೆಸಿದ್ದರು.
ಕಾವಳಪಡೂರು ನಿವಾಸಿ ಅಬ್ದುಲ್ ಖಾದರ್ ಎಂಬವರ ಪತ್ನಿ ನಕಲಿ ಬಾಬಾನ ವಿರುದ್ಧ ಅತ್ಯಾಚಾರದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು. ಆಗ ಅಲ್ಲಿಂದ ಪರಾರಿಯಾಗಿದ್ದ ಪಾತಕಿ ಮಂತ್ರವಾದಿ ಮಸ್ತಾನ್ ಇದೀಗ ಬಿ.ಸಿ ರೋಡ್ ಸಿವಿಲ್ ನ್ಯಾಯಾಲಯದಲ್ಲಿ ಶರಣಾಗಿದ್ದು ನ್ಯಾಯಾಲಯ ಆತನಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಈತನ ಕಾಮಕಾಂಡದ ವಿರುದ್ಧ ಬಂಟ್ವಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications